ಮುರುಘಾ ಮಠದ ಇತಿಹಾಸ ಮತ್ತು ಪರಂಪರೆ!

Chitradurga Murugha Math

ಪೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗದ ಬೃಹನ್ಮಠದ ಶಿವಮೂರ್ತಿ ಶರಣರು ಜೈಲು ಸೇರಿದ್ದಾರೆ. ಈ ಹೊತ್ತಿನಲ್ಲಿ ಮುರುಘಾ ಮಠದ (Murugha Math History) ಇತಿಹಾಸದ ಮೇಲೊಂದು ಇಣುಕು ನೋಟ.

ಚಿತ್ರದುರ್ಗವನ್ನಾಳಿದ ಪ್ರಸಿದ್ದ ಪಾಳೆಗಾರರಲ್ಲಿ ಬಿಚ್ಚುಗತ್ತಿ ಭರಮಣ್ಣ ನಾಯಕರು ಒಬ್ಬರು. ಇವರಿಗೆ ‘ಮುಂದೇ ನೀನು ಚಿತ್ರದುರ್ಗದ ರಾಜನಾಗುತ್ತಿರಿ’ ಎಂದು ಬೃಹನ್ಮಠದ ಎಂಟನೇ ಪಟ್ಟಾಧಿಕಾರಿಗಳಾಗಿದ್ದ ಮುರುಘೇಂದ್ರ ರಾಜೇಂದ್ರರು (ಕ್ರಿ.ಶ.1640-1710) ಆರ್ಶೀವಾದ ಮಾಡಿದರಂತೆ. ನಂತರದಲ್ಲಿ ಪ್ರವಾಸದಿಂದ ಮರಳಿ ಬರುವ ವೇಳೆಗೆ, ಭರಮಣ್ಣ ನಾಯಕ ಚಿತ್ರದುರ್ಗದ ರಾಜನಾಗಿದ್ದ. ಪ್ರವಾಸದಿಂದ ಹಿಂದಿರುಗಿದ ತಮ್ಮ ಗುರುಗಳನ್ನು ಕಂಡು ಹರ್ಷಿತಗೊಂಡ ರಾಜ ಭರಮಣ್ಣ ನಾಯಕ ತುಂಬು ಮನಸ್ಸಿನಿಂದ ಗುರುಗಳನ್ನು ಸ್ವಾಗತಿಸಿದ. ತನ್ನ ಭಕ್ತಿಯ ಕಾಣಿಕೆಯೆಂಬಂತೆ ಬೆಟ್ಟದ ಮೇಲಿರುವ ಸಂಪಿಗೆ ಸಿದ್ದೇಶ್ವರ ದೇವಸ್ಥಾನದ ಪಕ್ಕದಲ್ಲಿ 360 ಅಂಕಣಗಳ ವಿಸ್ತಾರವಾದ ದೊಡ್ಡ ಮಠವೊಂದನ್ನು (Murugha Math History) ಕಟ್ಟಿಸಿಕೊಟ್ಟ.

ಅನಂತರ ಬೆಟ್ಟದಿಂದ ದೂರದಲ್ಲಿರುವ ಸ್ಥಳದಲ್ಲಿ ಇನ್ನೊಂದು ಮಠವನ್ನು ನಿರ್ಮಿಸಿದ. ಮಠಕ್ಕೆ ಅವನು ಅರ್ಪಿಸಿದ ವಸ್ತುಗಳಲ್ಲಿ ಗಂಟೆಯೂ ಒಂದು. ಅದರಲ್ಲಿ ಅವರ ಹೆಸರಿದೆ. ಹೀಗಾಗಿ ಶ್ರೀ ಮುರುಘೇಂದ್ರ ರಾಜೇಂದ್ರರೇ ಈ ಪೀಠದ ಮೂಲ ಸ್ಥಾಪಕರಾಗಿದ್ದಾರೆ. ಈಗ ಬೆಟ್ಟದ ಮೇಲಿರುವ ಮಠ ಬಳಕೆಯಲ್ಲಿಲ್ಲದೆ ಕೇವಲ ಒಂದು ಸ್ಮಾರಕವಾಗಿ ಉಳಿದುಕೊಂಡಿದೆ.

ಇದನ್ನೂ ಓದಿ : BIG BREAKING: ಮುರುಘಾ ಸ್ವಾಮೀಜಿ ಬಂಧನ

ಈಗಿರುವ ಮುರುಘಾಮಠವು ಚಿತ್ರದುರ್ಗ-ದಾವಣಗೆರೆ ಹೆದ್ದಾರಿಯಲ್ಲಿ ಚಿತ್ರದುರ್ಗದಿಂದ ಸುಮಾರು 3 ಕಿ.ಮೀ. ದೂರದಲ್ಲಿದೆ. ಈ ಮಠ ಕ್ರಿ.ಶ. 1703ರ ಸುಮಾರಿನಲ್ಲಿ ನಿರ್ಮಾಣವಾಗಿರಬಹುದೆಂದು ಭಾವಿಸಲಾಗಿದೆ. ವಿಶಾಲವಾದ ಸ್ಥಳದಲ್ಲಿ ಭವ್ಯವಾದ ಅರಮನೆಯನ್ನು ಹೋಲುವಂತಹ ಕಟ್ಟಡವನ್ನು ಹೊಂದಿರುವ ಈ ಬೃಹನ್ಮಠ ಸ್ಥಾಪನೆಯಾದಗಿನಿಂದ ಪಾಳೆಯಗಾರರಿಂದ ಇನ್ನಿತರ ಸಂಸ್ಥಾನಗಳವರಿಂದ ಎಲ್ಲಕ್ಕಿಂತ ಹೆಚ್ಚಾಗಿ ಜನಸಾಮಾನ್ಯರಿಂದ ಗೌರವಾದರಗಳು ಸಲ್ಲುತ್ತಲೇ ಬಂದಿವೆ.

ಈಗಿನ ಪಟ್ಟಾಧಿಕಾರಿಗಳಾದ ಶ್ರೀ ಶಿವಮೂರ್ತಿ ಸ್ವಾಮಿಗಳವರು ಮಠ ಹಾಗೂ ಭಕ್ತರಿಗಾಗಿ ಹಲವು ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಜನರಲ್ಲಿನ ಮೌಡ್ಯ ನಿಯಂತ್ರಣಕ್ಕಾಗಿಯೂ ಹಲವು ಕೆಲಸ ಮಾಡಿದ್ದಾರೆ. ಇವರ ಆಶ್ರಯದಲ್ಲಿ ಅನೇಕ ವಿದ್ಯಾಸಂಸ್ಥೆಗಳು ನಡೆಯುತ್ತಿವೆ.

ಇದನ್ನೂ ಓದಿ : ಮುರುಘಾ ಶ್ರೀಗಳಿಗೆ ಎದೆ ನೋವಂತೆ..! ಶಿಫ್ಟ್ ಮಾಡಿದ್ದು ಆಂಬುಲೆನ್ಸ್ ನಲ್ಲಿ ಅಲ್ಲ.!

LEAVE A REPLY

Please enter your comment!
Please enter your name here