ವಾರದ ಮೊದಲ ವಹಿವಾಟಿನ ದಿನವಾದ ಸೋಮವಾರ ಷೇರು ಮಾರುಕಟ್ಟೆ (Share Market) ಪಾತಾಳಕ್ಕೆ ಕುಸಿದಿದೆ. ಡಾಲರ್ (Dollar) ಎದುರು ರೂಪಾಯಿ (Rupee) ಇನ್ನಷ್ಷು ಪಾತಾಳಮುಖಿಯಾಗಿದೆ. ಚಿನ್ನದ (Gold Price) ಬೆಲೆ ಮತ್ತಷ್ಟು ಇಳಿಕೆ ಆಗಿದೆ.
ಡಾಲರ್ ಎದುರು ರೂಪಾಯಿ ಮೌಲ್ಯ ಇವತ್ತು ಬೆಳಗ್ಗೆ ಷೇರು ಮಾರುಕಟ್ಟೆಯಲ್ಲಿ ವಹಿವಾಟು ಪ್ರಾರಂಭ ಆಗುತ್ತಿದ್ದಂತೆ 45 ಪೈಸೆಯಷ್ಟು ಕುಸಿತ ಕಂಡಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 81 ರೂಪಾಯಿ 54 ಪೈಸೆಗೆ ಇಳಿದಿದೆ.
ಬಂಗಾರದ ಬೆಲೆಯಲ್ಲೂ ಭಾರೀ ಇಳಿಕೆ ಆಗಿದೆ. 10 ಗ್ರಾಂ ಬಂಗಾರದ ಬೆಲೆ 600 ರೂಪಾಯಿ ಇಳಿಕೆ ಆಗಿದೆ. ಎರಡೂವರೆ ವರ್ಷಗಳಲ್ಲಿ ಚಿನ್ನದ ಬೆಲೆ ಈಗ ದಿನವೊಂದರಲ್ಲಿ ಇಳಿಕೆ ಆಗಿರುವುದು ಇದೇ ಮೊದಲು.
ಷೇರು ಪೇಟೆಯಲ್ಲಿ ಬಿಎಸ್ಇ (BSE Index) ಸೂಚ್ಯಂಕ ದಿನದ ಆರಂಭದಲ್ಲೇ 750 ಅಂಕ ಕುಸಿದರೆ, ನಿಫ್ಟಿ (Nifty) 300 ಅಂಕದಷ್ಟು ಕುಸಿತ ಕಂಡಿದೆ.
ADVERTISEMENT
ADVERTISEMENT