ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಯಲ್ಲೇ ಇಂಗ್ಲೀಷ್​​ಗೆ ಆದ್ಯತೆ – ಕೊನೆಗೆ ಬಂದ ಕನ್ನಡ..!

Mysuru Dasara
Mysuru Dasara
ನಾಡಹಬ್ಬ ಮೈಸೂರು ದಸರಾ (Mysuru Dasra) (Mysuru Dasara) ಉದ್ಘಾಟನಾ ಕಾರ್ಯಕ್ರಮದಲ್ಲೇ ಕನ್ನಡವೇ ಕಡೆಗಣನೆ ಆಗಿದೆ.
ಆರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu), ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್​ ಕುಮಾರ್​ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್​ ಟಿ ಸೋಮಶೇಖರ್​ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡದ ಒಂದೇ ಒಂದು ಅಕ್ಷರವೂ ವೇದಿಕೆಯಲ್ಲಿ ಕಾಣಿಸಲಿಲ್ಲ.
ಅತಿಥಿಗಳ ಆಸನದ ಹಿಂಭಾಗದಲ್ಲಿ ಹಾಕಲಾಗಿದ್ದ ಪರದೆಯಲ್ಲಿ ಆರಂಭದಲ್ಲಿ ಇಂಗ್ಲೀಷ್​ ಬಿಟ್ಟರೆ ಮಾತೃಭಾಷೆಯ ಕನ್ನಡದ ಅಕ್ಷರವೇ ಕಾಣಿಸಲಿಲ್ಲ. ರಾಷ್ಟ್ರಪತಿಗಳು ದಸರಾ ಉದ್ಘಾಟಿಸಿದ ಬಳಿಕವಷ್ಟೇ ಕನ್ನಡದಲ್ಲಿ ಎಲ್​ಇಡಿ ಪರದೆ ಕಾಣಿಸಿಕೊಳ್ತು.
ಸರ್ಕಾರಿ ಕಾರ್ಯಕ್ರಮಗಳಲ್ಲಿ ಕನ್ನಡವೇ ಮೊದಲ ಆದ್ಯತೆ ಆಗಬೇಕೆಂದು ಹೇಳಿ ಕೆಲ ದಿನಗಳ ಹಿಂದೆಯಷ್ಟೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನಂದಿತ ಶರ್ಮಾ ಎಲ್ಲ ಇಲಾಖೆಗಳಿಗೆ ಸುತ್ತೋಲೆ ಹೊರಡಿಸಿದ್ದರು.
ಆದರೆ ಕನ್ನಡ ಕಡ್ಡಾಯ ಬಳಕೆಯ ಆದೇಶ ಆದೇಶಕ್ಕಷ್ಟೇ ಸೀಮಿತವಾಗಿದೆ.