ಬಿಜೆಪಿ ಸರ್ಕಾರದಲ್ಲಿ 20 ಸಾವಿರಕ್ಕೂ ಅಧಿಕ ರೌಡಿ ಶೀಟರ್​ಗಳು ರೌಡಿ ಪಟ್ಟಿಯಿಂದ ಹೊರಕ್ಕೆ..!

Assembly Session
2023ರ ಹೊಸ ವರ್ಷ ಶುರುವಾಗಿ ಇನ್ನೂ ಎರಡು ತಿಂಗಳು ಕಳೆದಿಲ್ಲ.
ಆದರೆ ಈ ಒಂದೂವರೆ ತಿಂಗಳ ಅವಧಿಯಲ್ಲೇ ಕರ್ನಾಟಕದ ಬಿಜೆಪಿ ಸರ್ಕಾರ ಬರೋಬ್ಬರೀ 7,361 ಮಂದಿ ರೌಡಿ ಶೀಟರ್​ಗಳನ್ನು ರೌಡಿಶೀಟರ್​ಗಳ ಪಟ್ಟಿಯಿಂದ ಕೈಬಿಟ್ಟಿದೆ.
ಚುನಾವಣಾ ವರ್ಷದ ಆರಂಭದಲ್ಲೇ ಈ ಪ್ರಮಾಣದಲ್ಲಿ ರೌಡಿ ಶೀಟರ್​ಗಳನ್ನು ರೌಡಿಶೀಟರ್​ ಕೈಬಿಟ್ಟಿರುವುದು ಈಗ ಪ್ರಶ್ನೆಗೆ ಕಾರಣವಾಗಿದೆ.
ಕಾಂಗ್ರೆಸ್​ ಪಕ್ಷದ ವಿಧಾನಪರಿಷತ್​​ ಸದಸ್ಯ ಅರವಿಂದ್​ ಕುಮಾರ್​ ಅರಳಿ ಅವರು ಕೇಳಿದ ಪ್ರಶ್ನೆ ಗೃಹ ಇಲಾಖೆ ಉತ್ತರ ನೀಡಿದೆ.
2018ರಿಂದ 2023ರವರೆಗೆ 26,139 ಮಂದಿಯನ್ನು ರೌಡಿ ಶೀಟರ್​ಗಳ ಪಟ್ಟಿಯಿಂದ ಕೈಬಿಡಲಾಗಿದೆ.
ಈ 26,139 ಮಂದಿಯಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲೇ ಬರೋಬ್ಬರೀ 20, 455 ಮಂದಿಯನ್ನು ರೌಡಿ ಶೀಟರ್​ ಪಟ್ಟಿಯಿಂದ ಕೈಬಿಡಲಾಗಿದೆ.
ರೌಡಿಶೀಟರ್​ಗಳ ಜೊತೆಗೆ ಬಿಜೆಪಿ ನಾಯಕರು ಕಾಣಿಸಿಕೊಂಡಿದ್ದು ಮತ್ತು ರೌಡಿ ಶೀಟರ್​ಗಳು ಬಿಜೆಪಿಯಿಂದ ಸ್ಪರ್ಧಿಸುವುದಾಗಿ ಫ್ಲೆಕ್ಸ್​ಗಳನ್ನು ಹಾಕಿಕೊಂಡಿದ್ದು ಬಿಜೆಪಿ ಸರ್ಕಾರಕ್ಕೆ ಮುಜುಗರ ಉಂಟು ಮಾಡಿತ್ತು.
ರೌಡಿ ಶೀಟರ್​ಗಳನ್ನು ಕೈ ಬಿಟ್ಟ ವರ್ಷಾವಾರು ಮಾಹಿತಿ:
2020: 1,718
2021: 8,062
2022: 3,314
2023: 7,361
2019ರ ಜುಲೈನಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಂಡ ಬಳಿಕ ಜುಲೈ 16ರಂದು ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು.
ರೌಡಿ ಶೀಟರ್​ಗಳನ್ನು ಕೈ ಬಿಟ್ಟ ವರ್ಷಾವಾರು ಮಾಹಿತಿ:
2019: 2,195
2018: 3,489
ಅಂದರೆ ಈ ಎರಡು ವರ್ಷಗಳಲ್ಲಿ ರೌಡಿ ಶೀಟರ್​ಗಳಿಂದ ಕೈಬಿಟ್ಟವರ ಸಂಖ್ಯೆ : 5,684
ರೌಡಿ ಶೀಟರ್​ ಪಟ್ಟಿಯಿಂದ ಕೈಬಿಡುವುದಕ್ಕೆ ಇರಬೇಕಿರುವ ಕಾರಣಗಳು:
1. ರೌಡಿ ಅಸಾಮಿ 65 ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನವಾಗಿರಬೇಕು.
2. ರೌಡಿ ಅಸಾಮಿ ಮೃತನಾಗಿದ್ದಲ್ಲಿ
3. ರೌಡಿ ಅಸಾಮಿ ಸಂಪೂರ್ಣ ಅಂಗವಿಕಲನಾಗಿದ್ದಲ್ಲಿ ಅಥವಾ ಮಾನಸಿಕ ಅಸ್ವಸ್ಥನಾಗಿದ್ದಲ್ಲಿ
4. ರೌಡಿ ಅಸಾಮಿಯು ಕಳೆದ 10 ವರ್ಷದಿಂದ ಯಾವುದೇ ಕೃತ್ಯಗಳಲ್ಲಿ ಭಾಗಿಯಾಗದೇ ಇದ್ದಲ್ಲಿ
ಕಳೆದ ಐದು ವರ್ಷಗಳಲ್ಲಿ ರೌಡಿ ಪಟ್ಟಿಗೆ ಸೇರಿರುವ ಸಂಖ್ಯೆ:
2018: 3,008
2019: 2,259
2020: 3,175
2021: 2,569
2022: 2,389
2023: 186

LEAVE A REPLY

Please enter your comment!
Please enter your name here