ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾನುವಾರ ಸಾಗಾಟ ನಿಷೇಧಕ್ಕೆ ಹೇರಲಾಗಿದ್ದ ನಿಷೇಧವನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ವಾಪಸ್ ಪಡೆದಿದೆ.
ಜಾನುವಾರ ಸಾಗಾಟ ನಿಷೇಧ ವಾಪಸ್ ಪಡೆದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಆದೇಶಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ 348 ಗ್ರಾಮಗಳಲ್ಲಿ 7,036 ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿತ್ತು.
ಅಲ್ಲದೇ 397 ಜಾನುವಾರುಗಳು ಸಾವನ್ನಪ್ಪಿದ್ದವು.
ಫೆಬ್ರವರಿ 15ರವರೆಗೆ ಜಿಲ್ಲೆಯಲ್ಲಿ 2,26,801 ಜಾನುವಾರುಗಳಿಗೆ ಚರ್ಮಗಂಟು ರೋಗ ನಿರೋಧಕ ಲಸಿಕೆ ಹಾಕಲಾಗಿತ್ತು.
ಕಳೆದ ಒಂದು ವಾರದಿಂದ ಚರ್ಮಗಂಟು ರೋಗ ವರದಿ ಆಗದೇ ಇರುವ ಕಾರಣ ಜಾನುವಾರು ಸಾಗಾಣಿಕೆಗೆ ಇದ್ದ ನಿಷೇಧವನ್ನು ಹಿಂಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ADVERTISEMENT
ADVERTISEMENT