ಗೋಬಿ ಮಂಚೂರಿಯನ್ ಮತ್ತು ಕಾಟನ್ ಕ್ಯಾಂಡಿಯಲ್ಲಿ ಬಳಸಲಾಗುವ ಕೆಂಪು ಬಣ್ಣದ ಪುಡಿಯ ಬಳಕೆಯನ್ನು ನಿಷೇಧಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಯಲ್ಲಿ Rhodamine-B ಎಂಬ ಕೆಂಪು ಬಣ್ಣ ಬರಿಸುವ ಪುಡಿಯನ್ನು ಬಳಸಲಾಗುತ್ತದೆ. ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ಆರೋಗ್ಯ ಇಲಾಖೆ ಈ ಬಣ್ಣದ ಪುಡಿಯ ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಕರ್ನಾಟಕದಲ್ಲಿ ಗೋಬಿ ಮಂಚೂರಿ ನಿಷೇಧ ಆಗಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸಲಾಗಿತ್ತು. ಆದರೆ ಗೋಬಿ ಮಂಚೂರಿ ನಿಷೇಧವಾಗಿಲ್ಲ, ಬದಲಿಗೆ ಅದಕ್ಕೆ ಬಳಸುವ ಕೆಂಪು ಬಣ ಬರಿಸುವ ಪುಡಿಯನ್ನು ನಿಷೇಧಿಸಲಾಗಿದೆ.
ಯಾಕೆ ಈ ಪುಡಿ ನಿಷೇಧ..?
Rhodamine-B ಸೇವನೆ ಕ್ಯಾನ್ಸರ್ ಕಾರಕ. ಈ ಬಣ್ಣವನ್ನು ಬಳಸುವುದು ಜವಳಿ, ಪೇಂಟ್, ಚರ್ಮೋದ್ಯಮ, ಪೇಪರ್ ಕೈಗಾರಿಕೆಗಳಲ್ಲಿ ಅವುಗಳಿಗೆ ಕೆಂಪು ಮತ್ತು ಗುಲಾಬಿ ಬಣ್ಣ ಬರಲು ಬಳಸುತ್ತಾರೆ.