ರಾಜ್ಯದಲ್ಲಿ ಅಪಾಯಕಾರಿ ‘ಕಾಟನ್ ಕ್ಯಾಂಡಿಯನ್ನ ನಿಷೇಧ ಮಾಡಲಾಗಿದ್ದು ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಘೋಷಣೆ ಮಾಡಿದ್ದಾರೆ.
ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಅಪಾಯಕಾರಿ ಕಾಟನ್ ಕ್ಯಾಂಡಿಯನ್ನ ಎಲ್ಲಿಯೂ ಮಾರಾಟ ಮಾಡುವಂತಿಲ್ಲ. ಮಾರಾಟ, ಬಳಕೆ ಮಾಡಿದರೇ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಕ್ಯಾನ್ಸರ್ ಉಂಟುಮಾಡುವ ರಾಸಾಯನಿಕಗಳು ಇರುವುದು ದೃಢಪಟ್ಟಿರುವುದರಿಂದ ತಮಿಳುನಾಡು ಸರ್ಕಾರ ಕಾಟನ್ ಕ್ಯಾಂಡಿಯನ್ನ ನಿಷೇಧಿಸಿತ್ತು. ಇದೀಗ ಕರ್ನಾಟಕದಲ್ಲೂ ಕಾಟನ್ ಕ್ಯಾಂಡಿಯನ್ನ ನಿಷೇಧಿಸಲಾಗಿದೆ.