BIG BREAKING: ರಫೆಲ್​ ಯುದ್ಧ ವಿಮಾನ ಖರೀದಿ ಹಗರಣ – ಪ್ರಧಾನಿ ಮೋದಿ ಭೇಟಿ ಬೆನ್ನಲ್ಲೇ ಅನಿಲ್​ ಅಂಬಾನಿಗೆ ಭಾರೀ ತೆರಿಗೆ ವಿನಾಯಿತಿ

ರಫೆಲ್​ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದ ಹೊಸ ಸ್ಫೋಟಕ ದಾಖಲೆ ಮತ್ತು ವರದಿ ಬಹಿರಂಗವಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ಒತ್ತಾಸೆಯಿಂದ ರಫೆಲ್​ ಯುದ್ಧ ವಿಮಾನ ವ್ಯವಹಾರದಲ್ಲಿ ಪಾಲುದಾರಿಕೆ ಪಡೆದುಕೊಂಡ ಉದ್ಯಮಿ ಅನಿಲ್​ ಅಂಬಾನಿಗೆ ಫ್ರಾನ್ಸ್​ ಸರ್ಕಾರ ಭಾರೀ ಪ್ರಮಾಣದ ತೆರಿಗೆ ವಿನಾಯಿತಿ ನೀಡಲಾಗಿದೆ ಎಂಬ ಸ್ಫೋಟಕ ವರದಿಯನ್ನು ಪ್ರಕಟಿಸಿವೆ.

ಈ ತನಿಖಾ ವರದಿಯನ್ನು ಮೊದಲಿಗೆ ಫ್ರಾನ್ಸ್​ ಪ್ರಮುಖ ದಿನಪತ್ರಿಕೆ ಲೆ ಮೊಂಡೆಯಲ್ಲಿ ವರದಿಯಾಗಿತ್ತು. ಫ್ರಾನ್ಸ್​ನ ವೆಬ್​ಸೈಟ್​ ಮೀಡಿಯಾಪಾರ್ಟ್​ ಪ್ರಕಾರ ಅನಿಲ್​ ಅಂಬಾನಿ ಅವರ ಒಡೆತನದ ಫ್ಲ್ಯಾಗ್​ ಅಟ್ಲಾಂಟಿಕ್​ ಫ್ರಾನ್ಸ್​ ಎಂಬ ಕಂಪನಿಗೆ ಬರೋಬ್ಬರೀ 144 ದಶ ಲಕ್ಷ ಯುರೋ ಮೊತ್ತದ ತೆರಿಗೆ ಕಡಿತ ಮಾಡಲಾಗಿದೆ ಎಂದು ಮೀಡಿಯಾ ಪಾರ್ಟ್ ವರದಿ ಮಾಡಿದೆ.

ತೆರಿಗೆ ಪಾವತಿ ನೀಡಲಾಗಿರುವ ನೋಟಿಸ್​ ವಾಪಸ್​ ಪಡೆಯುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸುವಂತೆ ಅನಿಲ್​ ಅಂಬಾನಿ ಅವರು ಆಗ ಫ್ರಾನ್ಸ್​ನಲ್ಲಿ ಭಾರತದ ರಾಯಭಾರಿಯಾಗಿದ್ದ ಅರುಣ್​ ಸಿಂಗ್​ ಮತ್ತು ಆಗ ಆರ್ಥಿಕ ಸಚಿವರಾಗಿದ್ದ ಈಗ ಫ್ರಾನ್ಸ್​ ಅಧ್ಯಕ್ಷ ಎಮಾನ್ಯುಯಲ್​ ಮ್ಯಾಕ್ರನ್​ಗೆ ಮತ್ತು ಆಗ ಹಣಕಾಸು ಸಚಿವರಾಗಿದ್ದ ಮೈಕಲ್​ ಸ್ಯಾಪಿನ್​ಗೆ ಪತ್ರ ಬರೆದಿದ್ದರು.

ಈ ಪತ್ರ ಬರೆದ ಬಳಿಕ ಅನಿಲ್​ ಅಂಬಾನಿಗೆ ಫ್ರಾನ್ಸ್​ ಸರ್ಕಾರ ತೆರಿಗೆ ವಿನಾಯಿತಿಯನ್ನು ನೀಡಿತ್ತು. 2008ರಿಂದ 2012ರವರೆಗೆ ತಮ್ಮ ಕಂಪನಿ ಮೂಲಕ ಫ್ರಾನ್ಸ್​ನಲ್ಲಿ ಮಾಡಿದ್ದ ವಹಿವಾಟಿಗೆ ಅಂಬಾನಿ 151 ಮಿಲಿಯನ್​ ಯುರೋದಷ್ಟು ಮೊತ್ತವನ್ನು ತೆರಿಗೆಯಾಗಿ ಪಾವತಿಸಬೇಕಿತ್ತು.

2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಫಾನ್ಸ್​ಗೆ ಭೇಟಿ ನೀಡಿ ಹೊಸ ಒಪ್ಪಂದ ಮಾಡಿಕೊಳ್ಳುವ ವೇಳೆ ಅವರ ಜೊತೆಗೆ ಅನಿಲ್​ ಅಂಬಾನಿ ಕೂಡಾ ಇದ್ದರು. ಪ್ರಧಾನಿ ಮೋದಿಯವರ ಈ ಭೇಟಿಯ ಬಳಿಕ ಫ್ರಾನ್ಸ್​ ಸರ್ಕಾರ ಅನಿಲ್​ ಅಂಬಾನಿಗೆ ಭಾರೀ ಮೊತ್ತದ ತೆರಿಗೆ ಕಡಿತವನ್ನು ಮಾಡಿತ್ತು.

ಈ ದಾಖಲೆಗಳು ಬಹಿರಂಗವಾಗುವುದರೊಂದಿಗೆ ಸರ್ಕಾರಿ ಸ್ವಾಮ್ಯದ ಹೆಚ್​ಎಎಲ್​ನ್ನು ಧಿಕ್ಕರಿಸಿ ಅನಿಲ್​ ಅಂಬಾನಿ ಮಾಲೀಕತ್ವದ ಕಂಪನಿಯ ಜೊತೆಗೆ ರಫೆಲ್​ ಯುದ್ಧ ವಿಮಾನ ಉತ್ಪಾದನೆಗೆ ಪ್ರಧಾನಿ ಮೋದಿ ಸರ್ಕಾರ ಮಾಡಿಕೊಂಡ ಒಪ್ಪಂದ ಇನ್ನಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

LEAVE A REPLY

Please enter your comment!
Please enter your name here