Rahul Gandhi: ಹೊಸ ಮನೆಗೆ ಹೋಗಲಿದ್ದಾರೆ ಕಾಂಗ್ರೆಸ್​ ನಾಯಕ

Rahul Gandhi
Rahul Gandhi

ಲೋಕಸಭಾ (Loksabha) ಸಂಸದ ಸ್ಥಾನದಿಂದ ಅನರ್ಹರಾದ ಬಳಿಕ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ (Congress Leader Rahul Gandhi) ಅವರು ಈಗ ಹೊಸ ಮನೆಗೆ ಹೋಗಲಿದ್ದಾರೆ.

ಅಂದಹಾಗೆ ರಾಹುಲ್​ ಅವರು ಹೋಗಲಿರುವ ಆ ಮನೆ ದೀರ್ಘಕಾಲದವರೆಗೆ ದೆಹಲಿ (Delhi) ಮುಖ್ಯಮಂತ್ರಿ ಆಗಿದ್ದ ಶೀಲಾ ದೀಕ್ಷಿತ್ (Sheila Dixit)​ ಅವರ ಕುಟುಂಬಕ್ಕೆ ಸೇರಿದ್ದು.

ದಕ್ಷಿಣ ದೆಹಲಿಯ ನಿಜಾಮುದ್ದೀನ್​ ಪೂರ್ವದಲ್ಲಿರುವ ಮೂರು ಬೆಡ್​ರೂಂನ ಮನೆಗೆ ರಾಹುಲ್​ ಗಾಂಧಿ ತೆರಳಲಿದ್ದಾರೆ. ಶೀಲಾ ದೀಕ್ಷಿತ್​ ಅವರು ತಮ್ಮ ಕೊನೆಯ ದಿನಗಳನ್ನು ಈ ಮನೆಯಲ್ಲೇ ಕಳೆದಿದ್ದರು.

1,500 ಚದರಡಿಯಷ್ಟು ದೊಡ್ಡದಿರುವ ಈ ಮನೆಯ ಎದುರಿಗೆ 16ನೇ ಶತಮಾನದಲ್ಲಿ ಮೊಘಲರು ಕಟ್ಟಿದ ಹುಮಾಯುನ್​ ಸಮಾಧಿ ಕಾಣುತ್ತದೆ.

19 ವರ್ಷಗಳಿಂದ ಸಂಸದರಾಗಿದ್ದ ರಾಹುಲ್​ ಅವರು ತುಘಲಕ್​ ಲೇನ್​ ಲ್ಯುಟೆನ್ಸ್​ನಲ್ಲಿರುವ ಬಂಗಲೆಯಲ್ಲಿದ್ದರು. ಏಪ್ರಿಲ್​ 22ರಂದು ಸರ್ಕಾರಿ ಬಂಗಲೆ ಖಾಲಿ ಮಾಡಿದ ವೇಳೆ ಕಾಂಗ್ರೆಸ್​ ಕಾರ್ಯಕರ್ತರು ನಮ್ಮ ಮನೆಯೇ ನಿಮ್ಮ ಮನೆ, ನಮ್ಮ ಮನೆಗೆ ಬಂದು ಇರಿ ಎಂದು ಅಭಿಯಾನವನ್ನೂ ಮಾಡಿದ್ದರು.

ರಾಹುಲ್​ ಗಾಂಧಿಗಾಗಿ ಈಗಿರುವ ಶೀಲಾ ದೀಕ್ಷಿತ್​ ಕುಟುಂಬದವರು ಹತ್ತಿರದ ಫ್ಲ್ಯಾಟ್​ಗೆ ಹೋಗುತ್ತಿದ್ದಾರೆ.

1991ರಲ್ಲಿ ಶೀಲಾ ದೀಕ್ಷಿತ್​ ಅವರು ಈ ಮನೆಯನ್ನು ಖರೀದಿಸಿದ್ದರು. 1998ರಿಂದ 2013ರವರೆಗೆ 15 ವರ್ಷಗಳವರೆಗೆ ಸತತವಾಗಿ ಶೀಲಾ ದೀಕ್ಷಿತ್​ ಅವರೇ ದೆಹಲಿ ಮುಖ್ಯಮಂತ್ರಿಯಾಗಿದ್ದರು. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಂದ ಬಳಿಕ ಕೇರಳ ರಾಜ್ಯಪಾಲೆ ಹುದ್ದೆಗೆ ರಾಜೀನಾಮೆ ನೀಡಿದ್ದ ಅವರು ನಿಜಾಮುದ್ದೀನ್​ ಪೂರ್ವದಲ್ಲಿರುವ ತಮ್ಮ ಮನೆಗೆ ಬಂದು ನೆಲೆಸಿದ್ದರು. 

LEAVE A REPLY

Please enter your comment!
Please enter your name here