ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನು 10 ತಿಂಗಳು ಬಾಕಿ ಇರುವಂತೆ ಪ್ರತಿಕ್ಷಣನ್ಯೂಸ್ ವೆಬ್ಸೈಟ್ ಮತ್ತು ರಾಧಿಕಾ ಮೀಡಿಯಾ ಜಂಟಿಯಾಗಿ ಮೊದಲ ಚುನಾವಣಾ ಪೂರ್ವ ಸಮೀಕ್ಷೆ ಕೈಗೊಂಡಿದೆ.
ಕರ್ನಾಟಕದ ಮೊದಲ ಡಿಜಿಟಲ್ ಮೀಡಿಯಾ ಸಮೀಕ್ಷೆ ಇದಾಗಿದೆ. ಮೊದಲ ಹಂತದ ಸಮೀಕ್ಷೆಯಲ್ಲಿ ಪ್ರತಿಕ್ಷಣ ನ್ಯೂಸ್ ಮತ್ತು ರಾಧಿಕಾ ಮೀಡಿಯಾ ಬೆಂಗಳೂರು ನಗರ ಒಳಗೊಂಡAತೆ ಹಳೇ ಮೈಸೂರು ಭಾಗದ 11 ಜಿಲ್ಲೆಗಳ 89 ಕ್ಷೇತ್ರಗಳ ಬಗ್ಗೆ ಮೊದಲ ಹಂತದ ಚುನಾವಣಾ ಸಾಧ್ಯತೆಗಳ ಲೆಕ್ಕಾಚಾರವನ್ನು ಮುಂದಿಟ್ಟಿದೆ.
ಜಿಲ್ಲೆಯಲ್ಲಿರುವ ಒಟ್ಟು ವಿಧಾನಸಭಾ ಕ್ಷೇತ್ರಗಳು, ಮುಂದಿನ ಬಾರಿ ಯಾವ ಪಕ್ಷಕ್ಕೆ ಎಷ್ಟು ಗೆಲ್ಲಬಹುದು ಎಂಬ ಲೆಕ್ಕಾಚಾರ ಮತ್ತು ಆವರಣದಲ್ಲಿ () ಕಳೆದ ಬಾರಿ ಆ ಪಕ್ಷ ಆ ಜಿಲ್ಲೆಯಲ್ಲಿ ಪಡೆದಿದ್ದ ಸೀಟುಗಳ ಸಂಖ್ಯೆಯನ್ನು ನೀಡಿದ್ದೇವೆ.
ಚಾಮರಾಜನಗರ: 4
ಕಾಂಗ್ರೆಸ್: 04 (02)
ಬಿಜೆಪಿ: 00 (01)
ಜೆಡಿಎಸ್: 00
(ಬಿಎಸ್ಪಿ+ಜೆಡಿಎಸ್ ಮೈತ್ರಿಯಿಂದ ಕೊಳ್ಳೇಗಾಲದಿಂದ ಬಿಎಸ್ಪಿಯಿಂದ ಗೆದ್ದು ಎನ್ ಮಹೇಶ್ ಶಾಸಕರಾದರು. ಈಗ ಇವರು ಬಿಜೆಪಿ ಸೇರಿಕೊಂಡಿದ್ದಾರೆ).
ಮೈಸೂರು – 11
ಕಾಂಗ್ರೆಸ್: 08 (03)
ಬಿಜೆಪಿ: 02 (03)
ಜೆಡಿಎಸ್: 01 (05)
(ಜೆಡಿಎಸ್ ಬಳಿಯಿದ್ದ ಹುಣಸೂರು ಈಗ ಕಾಂಗ್ರೆಸ್ ಹಿಡಿತದಲ್ಲಿದೆ)
ಒಟ್ಟು: 15
ಚಾಮರಾಜನಗರ ಮತ್ತು ಮೈಸೂರು ಎರಡು ಜಿಲ್ಲೆಗಳ ಒಟ್ಟು 15 ವಿಧಾನಸಭಾ ಕ್ಷೇತ್ರಗಳ ಪೈಕಿ ರಾಧಿಕಾ ಸ್ಟುಡಿಯೋ ಮತ್ತು ಪ್ರತಿಕ್ಷಣನ್ಯೂಸ್ ಸಮೀಕ್ಷೆ ಪ್ರಕಾರ ಜೆಡಿಎಸ್ ಕೇವಲ 01 ಸ್ಥಾನ ಗೆಲ್ಲಲಿದೆ. ಬಿಜೆಪಿ 2 ಸ್ಥಾನ ಗೆಲ್ಲಲಿದೆ. ಕಾಂಗ್ರೆಸ್ 12 ಸ್ಥಾನ ಗೆಲ್ಲಲಿದೆ.
ಮಂಡ್ಯ: 7
ಕಾಂಗ್ರೆಸ್: 03 (00)
ಬಿಜೆಪಿ: 01 (00)
ಜೆಡಿಎಸ್: 03 (07)
(ಕೆ ಆರ್ ಪೇಟೆಯಲ್ಲಿ ಬಿಜೆಪಿ ಗೆದ್ದಿದೆ. ಈಗ ಮಂಡ್ಯದಲ್ಲಿ ಬಿಜೆಪಿ ಬಳಿ 1 ಸ್ಥಾನ, ಜೆಡಿಎಸ್ 6 ಕ್ಷೇತ್ರಗಳು)
ಒಟ್ಟು: 22
ಚಾಮರಾಜನಗರ, ಮೈಸೂರು, ಮಂಡ್ಯ ಈ ಮೂರು ಜಿಲ್ಲೆಗಳ ಒಟ್ಟು 22 ವಿಧಾನಸಭಾ ಕ್ಷೇತ್ರಗಳ ಪೈಕಿ ರಾಧಿಕಾ ಸ್ಟುಡಿಯೋ ಮತ್ತು ಪ್ರತಿಕ್ಷಣನ್ಯೂಸ್ ಸಮೀಕ್ಷೆ ಪ್ರಕಾರ ಜೆಡಿಎಸ್ ಕೇವಲ 04 ಸ್ಥಾನ ಗೆಲ್ಲಲಿದೆ. ಬಿಜೆಪಿ 03 ಸ್ಥಾನ ಗೆಲ್ಲಲಿದೆ. ಕಾಂಗ್ರೆಸ್ 15 ಸ್ಥಾನ ಗೆಲ್ಲಲಿದೆ.
ರಾಮನಗರ: 4
ಕಾಂಗ್ರೆಸ್ – 02 (01)
ಜೆಡಿಎಸ್ – 01 (03)
ಬಿಜೆಪಿ – 01 (00)
ಒಟ್ಟು: 26
ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ ಈ ನಾಲ್ಕು ಜಿಲ್ಲೆಗಳ ಒಟ್ಟು 26 ವಿಧಾನಸಭಾ ಕ್ಷೇತ್ರಗಳ ಪೈಕಿ ರಾಧಿಕಾ ಸ್ಟುಡಿಯೋ ಮತ್ತು ಪ್ರತಿಕ್ಷಣನ್ಯೂಸ್ ಸಮೀಕ್ಷೆ ಪ್ರಕಾರ ಜೆಡಿಎಸ್ ಕೇವಲ 05 ಸ್ಥಾನ ಗೆಲ್ಲಲಿದೆ. ಬಿಜೆಪಿ 04 ಸ್ಥಾನ ಗೆಲ್ಲಲಿದೆ. ಕಾಂಗ್ರೆಸ್ 17 ಸ್ಥಾನ ಗೆಲ್ಲಲಿದೆ.
ಹಾಸನ: 7
ಕಾಂಗ್ರೆಸ್: 02 (00)
ಬಿಜೆಪಿ: 01 (01)
ಜೆಡಿಎಸ್: 04 (06)
ಒಟ್ಟು: 33
ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಹಾಸನ ಈ ಐದು ಜಿಲ್ಲೆಗಳ ಒಟ್ಟು 33 ವಿಧಾನಸಭಾ ಕ್ಷೇತ್ರಗಳ ಪೈಕಿ ರಾಧಿಕಾ ಸ್ಟುಡಿಯೋ ಮತ್ತು ಪ್ರತಿಕ್ಷಣನ್ಯೂಸ್ ಸಮೀಕ್ಷೆ ಪ್ರಕಾರ ಜೆಡಿಎಸ್ ಕೇವಲ 09 ಸ್ಥಾನ ಗೆಲ್ಲಲಿದೆ. ಬಿಜೆಪಿ 05 ಸ್ಥಾನ ಗೆಲ್ಲಲಿದೆ. ಕಾಂಗ್ರೆಸ್ 19 ಸ್ಥಾನ ಗೆಲ್ಲಲಿದೆ.
ತುಮಕೂರು: 11
ಕಾಂಗ್ರೆಸ್: 05 (03)
ಬಿಜೆಪಿ: 04 (04)
ಜೆಡಿಎಸ್: 02 (04)
(ಜೆಡಿಎಸ್ ಬಳಿಯಿದ್ದ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ. ಈಗ ತುಮಕೂರು ಜಿಲ್ಲೆಯಲ್ಲಿ ಬಿಜೆಪಿ ಬಳಿ ಇರುವ ಕ್ಷೇತ್ರ 5. ಜೆಡಿಎಸ್ ಬಳಿ ಮೂರು ಕ್ಷೇತ್ರ ಇದೆ)
ಒಟ್ಟು: 44
ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಹಾಸನ, ತುಮಕೂರು ಈ ಆರು ಜಿಲ್ಲೆಗಳ ಒಟ್ಟು 44 ವಿಧಾನಸಭಾ ಕ್ಷೇತ್ರಗಳ ಪೈಕಿ ರಾಧಿಕಾ ಸ್ಟುಡಿಯೋ ಮತ್ತು ಪ್ರತಿಕ್ಷಣನ್ಯೂಸ್ ಸಮೀಕ್ಷೆ ಪ್ರಕಾರ ಜೆಡಿಎಸ್ ಒಟ್ಟು 11 ಸ್ಥಾನ ಗೆಲ್ಲಲಿದೆ. ಬಿಜೆಪಿ 09 ಸ್ಥಾನ ಗೆಲ್ಲಲಿದೆ. ಕಾಂಗ್ರೆಸ್ 24 ಸೀಟುಗಳನ್ನು ಗೆಲ್ಲಲಿದೆ.
ಚಿಕ್ಕಬಳ್ಳಾಪುರ – 5
ಕಾಂಗ್ರೆಸ್ – 03 (04)
ಬಿಜೆಪಿ: 02 (00)
ಜೆಡಿಎಸ್: 00 (01)
(ಚಿಕ್ಕಬಳ್ಳಾಪುರ ಶಾಸಕ ಡಾ ಕೆ ಸುಧಾಕರ್ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋದರು. ಹೀಗಾಗಿ ಚಿಕ್ಕಬಳ್ಳಾಪುರದಲ್ಲಿ 1 ಕ್ಷೇತ್ರ ಬಿಜೆಪಿ ಹಿಡಿತದಲ್ಲಿದೆ).
ಒಟ್ಟು: 49
ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ ಈ 7 ಜಿಲ್ಲೆಗಳ ಒಟ್ಟು 49 ವಿಧಾನಸಭಾ ಕ್ಷೇತ್ರಗಳ ಪೈಕಿ ರಾಧಿಕಾ ಸ್ಟುಡಿಯೋ ಮತ್ತು ಪ್ರತಿಕ್ಷಣನ್ಯೂಸ್ ಸಮೀಕ್ಷೆ ಪ್ರಕಾರ ಜೆಡಿಎಸ್ ಒಟ್ಟು 11 ಸ್ಥಾನ ಗೆಲ್ಲಲಿದೆ. ಬಿಜೆಪಿ 11 ಸ್ಥಾನ ಗೆಲ್ಲಲಿದೆ. ಕಾಂಗ್ರೆಸ್ 27 ಸೀಟುಗಳನ್ನು ಗೆಲ್ಲಲಿದೆ.
ಕೋಲಾರ: 6
ಕಾಂಗ್ರೆಸ್: 4 (04)
ಬಿಜೆಪಿ: 01 (00)
ಜೆಡಿಎಸ್: 01 (01)
(2018ರ ಚುನಾವಣೆಯಲ್ಲಿ ಪಕ್ಷೇತರ ಶಾಸಕರಾಗಿ ಮುಳಬಾಗಿಲು ಕ್ಷೇತ್ರದಲ್ಲಿ ಹೆಚ್ ನಾಗೇಶ್ ಅವರು ಗೆದ್ದು ಶಾಸಕರಾದರು. ಈಗ ನಾಗೇಶ್ ಅವರೇ ಕಾಂಗ್ರೆಸ್ಗೆ ಹೋಗುವ ಸಾಧ್ಯತೆ ಇದೆ).
ಒಟ್ಟು: 55
ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಈ 8 ಜಿಲ್ಲೆಗಳ ಒಟ್ಟು 55 ವಿಧಾನಸಭಾ ಕ್ಷೇತ್ರಗಳ ಪೈಕಿ ರಾಧಿಕಾ ಸ್ಟುಡಿಯೋ ಮತ್ತು ಪ್ರತಿಕ್ಷಣನ್ಯೂಸ್ ಸಮೀಕ್ಷೆ ಪ್ರಕಾರ ಜೆಡಿಎಸ್ ಒಟ್ಟು 12 ಸ್ಥಾನ ಗೆಲ್ಲಲಿದೆ. ಬಿಜೆಪಿ 12 ಸ್ಥಾನ ಗೆಲ್ಲಲಿದೆ. ಕಾಂಗ್ರೆಸ್ 31 ಸೀಟುಗಳನ್ನು ಗೆಲ್ಲಲಿದೆ.
ಕೊಡಗು: 2
ಕಾಂಗ್ರೆಸ್: 00 (00)
ಬಿಜೆಪಿ: 02 (02)
ಜೆಡಿಎಸ್: 00 (00)
ಒಟ್ಟು: 57
ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಕೊಡಗು ಈ 9 ಜಿಲ್ಲೆಗಳ ಒಟ್ಟು 57 ವಿಧಾನಸಭಾ ಕ್ಷೇತ್ರಗಳ ಪೈಕಿ ರಾಧಿಕಾ ಸ್ಟುಡಿಯೋ ಮತ್ತು ಪ್ರತಿಕ್ಷಣನ್ಯೂಸ್ ಸಮೀಕ್ಷೆ ಪ್ರಕಾರ ಜೆಡಿಎಸ್ ಒಟ್ಟು 12 ಸ್ಥಾನ ಗೆಲ್ಲಲಿದೆ. ಬಿಜೆಪಿ 14 ಸ್ಥಾನ ಗೆಲ್ಲಲಿದೆ. ಕಾಂಗ್ರೆಸ್ 31 ಸೀಟುಗಳನ್ನು ಗೆಲ್ಲಲಿದೆ.
ಬೆಂಗಳೂರು ಗ್ರಾಮಾಂತರ: 4
ಕಾಂಗ್ರೆಸ್ – 03 (02)
ಜೆಡಿಎಸ್: 01 (02)
ಬಿಜೆಪಿ: 00
ಒಟ್ಟು: 61
ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಕೊಡಗು, ಬೆಂಗಳೂರು ಗ್ರಾಮಾಂತರ ಈ 10 ಜಿಲ್ಲೆಗಳ ಒಟ್ಟು 61 ವಿಧಾನಸಭಾ ಕ್ಷೇತ್ರಗಳ ಪೈಕಿ ರಾಧಿಕಾ ಸ್ಟುಡಿಯೋ ಮತ್ತು ಪ್ರತಿಕ್ಷಣನ್ಯೂಸ್ ಸಮೀಕ್ಷೆ ಪ್ರಕಾರ ಜೆಡಿಎಸ್ ಒಟ್ಟು 13 ಸ್ಥಾನ ಗೆಲ್ಲಲಿದೆ. ಬಿಜೆಪಿ 14 ಸ್ಥಾನ ಗೆಲ್ಲಲಿದೆ. ಕಾಂಗ್ರೆಸ್ 34 ಸೀಟುಗಳನ್ನು ಗೆಲ್ಲಲಿದೆ.
ಬೆಂಗಳೂರು: 28
ಕಾಂಗ್ರೆಸ್: 15 (15)
ಬಿಜೆಪಿ: 13 (11)
ಜೆಡಿಎಸ್: 00 (2)
(ಕಾಂಗ್ರೆಸ್ ಬಳಿಯಿದ್ದ ಮೂರು ಕ್ಷೇತ್ರಗಳು, ಜೆಡಿಎಸ್ ಬಳಿಯಿದ್ದ 1 ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ).
ಒಟ್ಟು: 89 ಕ್ಷೇತ್ರಗಳು
ಒಟ್ಟು 11 ಜಿಲ್ಲೆಗಳ 89 ವಿಧಾನಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್ – 13, ಬಿಜೆಪಿ – 27 ಮತ್ತು ಕಾಂಗ್ರೆಸ್ 49 ಕ್ಷೇತ್ರಗಳನ್ನು ಗೆಲ್ಲಬಹುದು ಎಂದು ಪ್ರತಿಕ್ಷಣ ನ್ಯೂಸ್ ಮತ್ತು ರಾಧಿಕಾ ಮೀಡಿಯಾ ನಡೆಸಿರುವ ಜಂಟಿ ಚುನಾವಣಾ ಪೂರ್ವ ಸಮೀಕ್ಷೆ ಅಂದಾಜಿಸಿದೆ.