ದೇಶದ ಪ್ರಮುಖ ಸುದ್ದಿವಾಹಿನಿ ಎನ್ಡಿಟಿವಿ ಈಗ ಅಧಿಕೃತವಾಗಿ ದೇಶದ ದೈತ್ಯ ಉದ್ಯಮಿ ಗೌತಮ್ ಅದಾನಿ ಅವರ ಪಾಲಾಗಿದೆ.
ಆರಂಭದಲ್ಲಿ ಅದಾನಿ ಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿದ್ದ ಎನ್ಡಿಟಿವಿ ಸಂಸ್ಥಾಪಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಈಗ ತಮ್ಮ ಷೇರಿನ ಬಹುಭಾಗವನ್ನು ಅದಾನಿ ಕಂಪನಿಗೆ ಮಾರಲು ತೀರ್ಮಾನಿಸಿದ್ದಾರೆ.
ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ದಂಪತಿ ಶೇಕಡಾ 27.6ರಷ್ಟು ಷೇರನ್ನು ಅದಾನಿಗೆ ಮಾರುವ ಬಗ್ಗೆ ಘೋಷಿಸಿಕೊಂಡಿದ್ದಾರೆ.
ಈ ಮೂಲಕ ಎನ್ಡಿಟಿವಿಯಲ್ಲಿ ಅದಾನಿ ಪಾಲು ಶೇಕಡಾ 64.71ಕ್ಕೆ ಏರಿಕೆ ಆಗಿದ್ದು, ಅದಾನಿ ಎನ್ಡಿಟಿವಿಯ ಅತೀ ದೊಡ್ಡ ಪಾಲುದಾರರಾಗಿದ್ದಾರೆ.
ಅದಾನಿ ಕಂಪನಿ ಶೇಕಡಾ 64.71ರಷ್ಟು ಷೇರು, ಸಾರ್ವಜನಿಕರು ಶೇಕಡಾ 30.29ರಷ್ಟು ಷೇರು ಮತ್ತು ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಜೊತೆಯಾಗಿ ಶೇಕಡಾ 5ರಷ್ಟು ಷೇರು ಹೊಂದಿದ್ದಾರೆ.
ಡಿಸೆಂಬರ್ 30ರೊಳಗೆ ಅಥವಾ ಆ ಬಳಿಕ ಪ್ರಣಯ್ ರಾಯ್ ದಂಪತಿ ಅದಾನಿ ಕಂಪನಿಗೆ ಅಧಿಕೃತವಾಗಿ ಷೇರುಗಳನ್ನು ಮಾರಲಿದ್ದಾರೆ.
ಕಳೆದ 60 ದಿನಗಳ ಅವಧಿಯಲ್ಲಿ ಎನ್ಡಿಟಿವಿಯ ಷೇರು ಮೌಲ್ಯ 364 ರೂಪಾಯಿಯಿದ್ದು, ಅದಾನಿ ಪ್ರಣಯ್ರಾಯ್ ದಂಪತಿ ಬಳಿಯಿಂದ ಷೇರು ಖರೀದಿಗೆ 648 ಕೋಟಿ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ.
ADVERTISEMENT
ADVERTISEMENT