CM ಸಿದ್ದರಾಮಯ್ಯ ಸರ್ಕಾರದ ಕೊಡುಗೆ ಸ್ಮರಿಸಿದ BJP ನಾಯಕ ಪ್ರಮೋದ್​ ಮಧ್ವರಾಜ್​

ಕಾಂಗ್ರೆಸ್​ ಬಿಟ್ಟು ಬಿಜೆಪಿಗೆ ಸೇರಿರುವ ಉಡುಪಿ ಮಾಜಿ ಶಾಸಕ, ಮಾಜಿ ಸಚಿವ ಪ್ರಮೋದ್​ ಮಧ್ವರಾಜ್​ ಅವರು 2018ರವರೆಗೆ ಇದ್ದ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ನೀಡಿದ್ದ ಕೊಡುಗೆಯನ್ನು ಸ್ಮರಿಸಿದ್ದಾರೆ.

ಈ ಬಗ್ಗೆ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಉಡುಪಿಯಲ್ಲಿ ಸರ್ಕಾರಿ ಜಿಮ್​ ಶುರುವಾಗಿದೆ. ಈ ಜಿಮ್​ಗೆ ಅಮೆರಿಕದ ಉಪಕರಣಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಸಾಮಾನ್ಯ ಶುಲ್ಕ ಪಾವತಿಸಿ ಜನ ಇದನ್ನು ಬಳಸಿಕೊಳ್ಳಿ

ಎಂದು ಹೊಗಳಿ ವಿಸಿಟ್​ ಉಡುಪಿ ಎಂಬ ಟ್ವಿಟ್ಟರ್​ ಖಾತೆಯಲ್ಲಿ ಹಾಕಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಪ್ರಮೋದ್​ ಮಧ್ವರಾಜ್​ ಅವರು ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ತಾವು ಸಚಿವರಾಗಿ ಈ ಜಿಮ್​ನ ಆರಂಭಕ್ಕೆ ನೀಡಿದ್ದ ಅನುದಾನದ ಬಗ್ಗೆ ನೆನೆಪಿಸಿಕೊಂಡಿದ್ದಾರೆ.

ಇದು ಅತ್ಯಂತ ರಾಜ್ಯದಲ್ಲಿ ಆರಂಭವಾದ ಅತ್ಯಂತ ಸೌಲಭ್ಯವುಳ್ಳ ಜಿಮ್​. ನಾನು ಕ್ರೀಡಾ ಸಚಿವನಾಗಿದ್ದಾಗ ಉಡುಪಿ ಯುವ ಜನತೆಗಾಗಿ ಅಗ್ಗದ ವೆಚ್ಚದಲ್ಲಿ ಈ ಜಿಮ್​ ಆರಂಭಿಸಿದ್ದೆ. ನಾನು 2 ಕೋಟಿ ರೂಪಾಯಿ ಅನುದಾನ ನೀಡಿದ್ದೆ ಜೊತೆ ಎಸಿಯನ್ನೂ ಕೂಡಾ ನನಗೆ ಚೆನ್ನಾಗಿ ನೆನೆಪಿರುವ ಹಾಗೆ..

ಎಂದು ಪ್ರಮೋದ್​ ಮಧ್ವರಾಜ್​ ಪ್ರತಿಕ್ರಿಯಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಪ್ರಮೋದ್​ ಮಧ್ವರಾಜ್​ ಅವರು ಯುವಜನ ಸೇವೆ ಮತ್ತು ಕ್ರೀಡಾ ಸಚಿವರಾಗಿದ್ದರು.