ಜೂನ್ 1ರಂದು ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ನಡೆಯಲಿದೆ. ಕೊನೆಯ ಹಂತದಲ್ಲಿ ಉತ್ತರಪ್ರದೇಶದ 12 ಲೋಕಸಭಾ ಕ್ಷೇತ್ರಗಳು ಒಳಗೊಂಡು ಒಟ್ಟು 57 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಜೂನ್ 1ರಂದು ಕೊನೆಯ ಹಂತದ ಮತದಾನ ನಡೆಯಲಿರುವ ಕ್ಷೇತ್ರಗಳ ಪೈಕಿ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸ್ತಿರುವ ವಾರಣಾಸಿ ಕ್ಷೇತ್ರವೂ ಒಳಗೊಂಡಿದೆ.
ಜೂನ್ 1ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಮೇ 30ರಂದೇ ಬಹಿರಂಗ ಪ್ರಚಾರ ಕೊನೆಯಾಗಲಿದೆ.
ಜೂನ್ 4ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುವುದಕ್ಕೂ ಮೊದಲು ಪ್ರಧಾನಿ ಮೋದಿಯವರು ಕನ್ಯಾಕುಮಾರಿಯಲ್ಲಿ ವಿವೇಕಾನಂದ ಬಂಡೆಯಲ್ಲಿ ಧ್ಯಾನ ಮಾಡಲಿದ್ದಾರೆ.
ಮೇ 30ರಂದು ಕನ್ಯಾಕುಮಾರಿಗೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಮೇ 31ರಂದು ವಿವೇಕಾನಂದ ಬಂಡೆಯಲ್ಲಿ ಮೋದಿ ಧ್ಯಾನ ಮಾಡಲಿದ್ದಾರೆ. ಜೂನ್ 1ರಂದೂ ಒಂದು ವೇಳೆ ಕನ್ಯಾಕುಮಾರಿಯಲ್ಲೇ ಉಳಿದುಕೊಂಡರೇ ಆ ದಿನವೂ ಅಲ್ಲೇ ಧ್ಯಾನ ಮಾಡಲಿದ್ದಾರೆ.
2019ರಲ್ಲೂ ಲೋಕಸಭಾ ಚುನಾವಣೆ ಹೊತ್ತಿನಲ್ಲೇ ಪ್ರಧಾನಿ ಮೋದಿಯವರು ಉತ್ತರಾಖಂಡ್ ರಾಜ್ಯದ ಕೇದಾರ್ನಾಥ್ನಲ್ಲಿ ಧ್ಯಾನ ಮಾಡಿದ್ದರು. ಮೇ 18ರಂದು 17 ಗಂಟೆಗಳ ಧ್ಯಾನ ಮಾಡಿದ್ದ ಮೋದಿ ಆ ಬಳಿಕ ಪೂಜೆಯನ್ನೂ ಸಲ್ಲಿಸಿದ್ದರು.
ADVERTISEMENT
ADVERTISEMENT