ಜನಸಾಮಾನ್ಯರು, ರೈತರಿಗೆ ಮೋದಿ ಸರ್ಕಾರದಿಂದ ಆಘಾತ ನಿರೀಕ್ಷೆ

ಒಂದ್ಕಡೆ ದೇಶದ ಜನಸಾಮಾನ್ಯರು ಮತ್ತು ರೈತರು ಬೆಲೆ ಏರಿಕೆಯಿಂದ ಕಂಗೆಟ್ಟಿದ್ರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜನಸಾಮಾನ್ಯರು ಮತ್ತು ರೈತರಿಗೆ ಆಘಾತ ನೀಡುವ ಬಗ್ಗೆ ಯೋಚನೆ ಮಾಡುತ್ತಿದೆ.
ಮೂಲಗಳ ಪ್ರಕಾರ ಈ ವರ್ಷದ ಬಜೆಟ್​ನಲ್ಲಿ ಆಹಾರ ಭದ್ರತೆ ಮತ್ತು ರಸಗೊಬ್ಬರ ಮೇಲಿನ ಸಬ್ಸಿಡಿಯನ್ನು ಮೋದಿ ಸರ್ಕಾರ ಕಡಿತಗೊಳಿಸುವ ನಿರೀಕ್ಷೆ ಇದೆ.
ಸಬ್ಸಿಡಿ ಕಡಿತದ ಬಗ್ಗೆ ಮೋದಿ ಸರ್ಕಾರ ಆಲೋಚಿಸುತ್ತಿದೆ ಎಂದು ವರದಿಯಾಗಿದೆ.
ರಸಗೊಬ್ಬರ ಮೇಲಿನ ಸಬ್ಸಿಡಿಯನ್ನು ಬರೋಬ್ಬರೀ 90 ಸಾವಿರ ಕೋಟಿ ರೂಪಾಯಿಯಷ್ಟು ಕಡಿತ ಮಾಡುವ ನಿರೀಕ್ಷೆ ಇದೆ.
ಕಳೆದ ವರ್ಷದ ಬಜೆಟ್​ನಲ್ಲಿ 2.30 ಲಕ್ಷ ಕೋಟಿ ರೂಪಾಯಿಯಷ್ಟು ರಸಗೊಬ್ಬರ ಸಬ್ಸಿಡಿ ನೀಡಲಾಗಿತ್ತು. ಈ ಬಾರಿ ಬಜೆಟ್​ಲ್ಲಿ ರಸಗೊಬ್ಬರ ಸಬ್ಸಿಡಿ 1.40 ಲಕ್ಷ ಕೋಟಿಗೆ ಇಳಿಕೆ ಆಗುವ ಸಾಧ್ಯತೆ ಇದೆ.
ಆಹಾರ ಭದ್ರತೆ ಮೇಲಿನ ಸಬ್ಸಿಡಿಯನ್ನೂ ಮೋದಿ ಸರ್ಕಾರ ಇಳಿಸುವ ಸಾಧ್ಯತೆ ಇದೆ. ಆಹಾರ ಸಬ್ಸಿಡಿ ಮೊತ್ತ 40 ಸಾವಿರ ಕೋಟಿ ರೂಪಾಯಿಯಷ್ಟು ಇಳಿಕೆ ನಿರೀಕ್ಷೆ ಇದೆ.
ಕಳೆದ ಬಜೆಟ್​ನಲ್ಲಿ 2.70 ಲಕ್ಷ ಕೋಟಿ ರೂ. ಮೊತ್ತದ ಸಬ್ಸಿಡಿ ಘೋಷಣೆ ಆಗಿತ್ತು. ಈ ಮೊತ್ತ ಈ ಬಾರಿ 2.30 ಲಕ್ಷ ಕೋಟಿ ರೂಪಾಯಿಗೆ ಇಳಿಕೆ ಆಗುವ ನಿರೀಕ್ಷೆ ಇದೆ.
ಈ ಮೂಲಕ 1.30 ಲಕ್ಷ ಕೋಟಿ ರೂ. ಮೊತ್ತದ ರಸಗೊಬ್ಬರ, ಆಹಾರ ಸಬ್ಸಿಡಿ ಕಡಿತ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here