ಪ್ರಧಾನಿ ನರೇಂದ್ರ ಮೋದಿಯವರು ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್ನಲ್ಲಿ ಹಾರಾಟ ನಡೆಸಿದರು.
ಬೆಂಗಳೂರಲ್ಲಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಹೆಚ್ಎಎಲ್ನಲ್ಲಿ ಹೆಚ್ಎಎಲ್ ನಿರ್ಮಿಸಿರುವ ತೇಜಸ್ ವಿಮಾನದಲ್ಲಿ ಮೊದಲ ಬಾರಿಗೆ ಪ್ರಯಾಣ ಕೈಗೊಂಡರು.
ತೇಜಸ್ ಒಂದೇ ಆಸನದ ಯುದ್ಧ ವಿಮಾನವಾಗಿದ್ದು ಪ್ರಧಾನಿಯವರು ಎರಡು ಆಸನದ ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟವನ್ನು ಕೈಗೊಂಡರು.
ತಮ್ಮ ಐತಿಹಾಸಿಕ ತೇಜಸ್ ಪ್ರಯಾಣದ ಬಗ್ಗೆ ಪ್ರಧಾನಿಯವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
https://x.com/narendramodi/status/1728308694512013360?s=20
೨೦೨೫ರ ವೇಳೆಗೆ ರಷ್ಯಾದ ಮಿಗ್ -೨೧ ಯುದ್ಧ ವಿಮಾನದ ಬದಲಿಗೆ ಪೂರ್ಣ ಪ್ರಮಾಣದಲ್ಲಿ ತೇಜಸ್ ಯುದ್ಧ ವಿಮಾನವನ್ನು ಭಾರತೀಯ ವಾಯುಸೇನೆ ಮತ್ತು ನೌಕಾಸೇನೆಯಲ್ಲಿ ಬಳಸಲಾಗುತ್ತದೆ.