ಶ್ರೀಕ್ಷೇತ್ರ ಶ್ರವಣಬೆಳಗೊಳ ಜೈನ ಮಠದ ಅಭಿವನ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಮಂಗಳವಾರ ನವೆಂಬರ್ 28ರಂದು ಅತಿಶಯ ಕ್ಷೇತ್ರ ನಲ್ಲೂರಿಗೆ ಪುರಪ್ರವೇಶ ಮಾಡಲಿದ್ದಾರೆ.
ನಾಳೆ ಬೆಳಗ್ಗೆ 9.35ಕ್ಕೆ ಪುರ ಪ್ರವೇಶ ಮಾಡಲಿರುವ ಸ್ವಾಮೀಜಿಯವರು ಕೂಷ್ಮಾಂಡಿನಿ ದೇವಿ ಆರಾಧನೆ ಮತ್ತು ಉಯ್ಯಾಲೆ ಸೇವೆ ಮತ್ತು ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ನಾಳೆ ಬೆಳಗ್ಗೆ 11 ಗಂಟೆಗೆ ಕೂಷ್ಮಾಂಡಿನಿ ಸಭಾಭವನದಲ್ಲಿ ಅಭಿವನ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಗೆ ಗುರುವಂದನಾ ಭಕ್ತಿ ಗೌರವ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ.
ಗುರುವಂದನಾ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ, ಕಾರ್ಕಳ ಜೈನ ಮಠದ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಹಿರಿಯ ನ್ಯಾಯವಾದಿಗಳಾದ ಎಂಕೆ ವಿಜಯ್ಕುಮಾರ್, ಮಾಜಿ ಸಚಿವರಾದ ಅಭಯಚಂದ್ರಜೈನ್ ಭಾಗವಹಿಸಲಿದ್ದಾರೆ.
ADVERTISEMENT
ADVERTISEMENT