ಶಾಲಾ ಪಠ್ಯವನ್ನು ಕೇಸರಿಕರಣ ಮಾಡುವ ಮೂಲಕ ವಿವಾದದ ಕೇಂದ್ರ ಬಿಂದು ಆಗಿರುವ ಪಠ್ಯಪುಸ್ತಕ ಮರು ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ, ಟಿಪ್ಪು ಸುಲ್ತಾನ್ ಟೀಕಿಸುವ ಸಂದರ್ಭದಲ್ಲಿ ಪಾವಗಡದ ಬಗ್ಗೆ ಉಲ್ಲೇಖ ಮಾಡಿದ್ದಾರೆ.
ಟಿಪ್ಪು ಸುಲ್ತಾನ್ ಕುರಿತು ಅನಗತ್ಯವಾದ ವಿಚಾರಗಳನ್ನು ತೆಗೆಯಲಾಗಿದೆ. ಟಿಪ್ಪು ಸುಲ್ತಾನ್ ರನ್ನು ಅತಿಯಾಗಿ ವೈಭವೀಕರಿಸುವ ಪ್ರಯತ್ನ ನಡೆದಿದೆ. ಇದು ಸರಿಯಲ್ಲ ಎಂದಿದ್ದಾರೆ.
ಟಿಪ್ಪು ಸುಲ್ತಾನ್ ಗೂ ತುಮಕೂರಿಗೂ ಸಂಬಂಧ ಇದೆ. ತುಮಕೂರನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು ಟಿಪ್ಪು ಆಳ್ವಿಕೆ ಮಾಡಿದ್ದರು. ಪಾವಗಡದಲ್ಲಿ ಕೋಟೆ ಕಟ್ಟಿದ್ದರು.
ಆದರೆ, ಚಿತ್ರದುರ್ಗಕ್ಕೆ ಹೋಗುವಾಗ ದಾರಿ ಮಧ್ಯೆ ಶಿರಾದಲ್ಲಿ ತನಗೆ ಗೌರವ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ವೆಂಕಪ್ಪಯ್ಯರನ್ನು ಪದವಿಯಿಂದ ಟಿಪ್ಪು ವಜಾ ಮಾಡಿದ್ದರು ಎಂದು ರೋಹಿತ್ ಚಕ್ರತೀರ್ಥ ವಿವರಿಸಿದ್ದಾರೆ.