ತುಮಕೂರು ಜಿಲ್ಲೆಯ ಪಾವಗಡ ವಿಧಾನಸಭಾ ಚುನಾವಣಾ ರಾಜಕೀಯಕ್ಕೆ ಹೊಸ ತಿರುವು ಸಿಕ್ಕಿದೆ. ಜೆಡಿಎಸ್ ಟಿಕೆಟ್ ಹಂಚಿಕೆಯಲ್ಲಿ ಆಗಬಹುದಾದ ಗೊಂದಲವನ್ನು ಮೊದಲೇ ಅರಿತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಬ್ಬರು ಟಿಕೆಟ್ ಆಕಾಂಕ್ಷಿಗಳ ನಡುವೆ ಸಂಧಾನ ಮಾಡಿದ್ದಾರೆ.
ಈ ಬಾರಿ ಯಾರಿಗೆ ಜೆಡಿಎಸ್ ಟಿಕೆಟ್..?
ಮಾಜಿ ಶಾಸಕ ತಿಮ್ಮರಾಯಪ್ಪ, ಜೆಡಿಎಸ್ ನ ಪ್ರಬಲ ಟಿಕೆಟ್ ಆಕಾಂಕ್ಷಿ ನೇರಳಕುಂಟೆ ನಾಗೇಂದ್ರ ಕುಮಾರ್ ನಡುವೆ ಸಂಧಾನ, ಒಪ್ಪಂದ ಮಾಡಿಸಿರುವ ಕುಮಾರಸ್ವಾಮಿ ಈ ಬಾರಿಯ ಜೆಡಿಎಸ್ ಟಿಕೆಟ್ ತಿಮ್ಮರಾಯಪ್ಪಗೆ ಎಂದು ಘೋಷಿಸಿದ್ದಾರೆ.
ಮುಂದಿನ ಬಾರಿ ನಿಮಗೆ ಟಿಕೆಟ್..?
ಮುಂದಿನ ಬಾರಿ ನೇರಳಕುಂಟೆ ನಾಗೇಂದ್ರ ಕುಮಾರ್ ಗೆ ಜೆಡಿಎಸ್ ಟಿಕೆಟ್ ಕೊಡುವುದಾಗಿ ಕುಮಾರಸ್ವಾಮಿ ಮಾತುಕೊಟ್ಟಿದ್ದಾರೆ.
ನೀವಿನ್ನು ಯಂಗ್ ಇದ್ದೀರಿ ನಾಗೇಂದ್ರ. ಈಬಾರಿ ತಿಮ್ಮರಾಯಪ್ಪಗೆ ಅವಕಾಶ ಮಾಡಿಕೊಡಿ. ಮುಂದಿನ ಬಾರಿ ನೀವೇ ನಿಲ್ಲುವಿರಂತೆ. ನಾನೇ ಟಿಕೆಟ್ ಕೊಡ್ತೇನೆ. ಈ ಬಾರಿ ನೀವು ಕಣಕ್ಕೆ ಇಳಿಯದೇ ತಿಮ್ಮರಾಯಪ್ಪರನ್ನು ಬೆಂಬಲಿಸಿ, ಒಂದೇ ಸಮುದಾಯದವರಾದ ನೀವಿಬ್ರೂ ಕಣದಲ್ಲಿದ್ರೆ ಯಾರೂ ಗೆಲ್ಲಲು ಆಗಲ್ಲ. ಮತ್ತೆ ವೆಂಕಟರಮಣಪ್ಪನಿಗೋ, ವೆಂಕಟೇಶ್ ಗೋ ಅವಕಾಶ ಮಾಡಿಕೊಟ್ಟಂತೆ ಆಗುತ್ತೆ. ನೀವು ಈ ಬಾರಿ ಕಣಕ್ಕೆ ಇಳಿಯದೇ ತಿಮ್ಮರಾಯಪ್ಪ ಬೆಂಬಲಿಸಿ
ಎಂದು ಕುಮಾರಸ್ವಾಮಿ ಕಿವಿಮಾತು ಹೇಳಿ ನಾಗೇಂದ್ರರನ್ನು ಒಪ್ಪಿಸಿದ್ದಾರೆ.
ಕಾಂಗ್ರೆಸ್ನಿಂದ ಯಾರಿಗೆ ಟಿಕೆಟ್..?
ಮತ್ತೊಂದುಕಡೆ ಕಾಂಗ್ರೆಸ್ ಟಿಕೆಟ್ ಗೆ ಹತ್ತು ಹಲವು ಮಂದಿ ಅರ್ಜಿ ಹಾಕಿ ಪ್ರಯತ್ನ ನಡೆಸಿದ್ದರೂ, ಕೆಪಿಸಿಸಿ ಮಾತ್ರ ಹಾಲಿ ಶಾಸಕ ವೆಂಕಟರಮಣಪ್ಪ ಪುತ್ರ ವೆಂಕಟೇಶ್ ಗೆ ಟಿಕೆಟ್ ನೀಡಲು ಮುಂದಾಗಿದೆ. ಅವರೊಬ್ಬರ ಹೆಸರನ್ನು ಮಾತ್ರ ಅಂತಿಮಗೊಳಿಸಿದೆ ಎಂದು ಗೊತ್ತಾಗಿದೆ.
ಈ ಮೂಲಕ ವೆಂಕಟೇಶ್ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ. ಮಾಜಿ ಶಾಸಕ ಸೋಮಲ ನಾಯ್ಕ್ ಪುತ್ರಿ ಗಾಯತ್ರಿ, ಕೋರ್ಟ್ ನರಸಪ್ಪ ಸೇರಿ ಹಲವರಿಗೆ ನಿರಾಸೆಯಾಗಿದೆ.
ಯಾರಿಗೆ ಬಿಜೆಪಿ ಟಿಕೆಟ್..?
ಈ ಮಧ್ಯೆ ಬಿಜೆಪಿ ಟಿಕೆಟ್ ಯಾರಿಗೆ ಎಂಬ ರಹಸ್ಯ ಇನ್ನೂ ದೃಢವಾಗಿಲ್ಲ. ಕೃಷ್ಣಾ ನಾಯ್ಕ್, ಇನ್ಸ್ಪೆಕ್ಟರ್ ರಾಘವೇಂದ್ರ ಪತ್ನಿ ಸೇರಿ ಹಲವರು ಬಿಜೆಪಿ ಟಿಕೆಟ್ ಗಿಟ್ಟಿಸಲು ಪ್ರಯತ್ನಿಸ್ತಿದ್ದಾರೆ.
ADVERTISEMENT
ADVERTISEMENT