ಕೇವಲ ಐದೇ ದಿನದಲ್ಲಿ ಪಾಸ್ಪೋರ್ಟ್ ಪೊಲೀಸ್ ಪರಿಶೀಲನೆ ಪೂರ್ಣಗೊಳಿಸುವ ಸಂಬಂಧ ಕೇಂದ್ರ ಸರ್ಕಾರ ಹೊಸ ಆ್ಯಪ್ನ್ನು ಬಿಡುಗಡೆ ಮಾಡಿದೆ.
‘mPassport Police App’ ಹೆಸರಿನ ಹೊಸ Appಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚಾಲನೆ ನೀಡಿದರು.
ಈ Appನಿಂದಾಗಿ ಪಾಸ್ಪೋರ್ಟ್ ಸಂಬಂಧ ನಡೆಸಲಾಗುವ ಪೊಲೀಸ್ ಪರಿಶೀಲನೆ ಇನ್ನಷ್ಟು ಸರಳವಾಗಲಿದ್ದು, 15 ದಿನಗಳ ಬದಲಿಗೆ ಐದೇ ದಿನದಲ್ಲಿ ಪೊಲೀಸ್ ಪರಿಶೀಲನೆ ಮುಗಿಯಲಿದೆ.
Appಗೆ ಚಾಲನೆ ನೀಡಿದ ಶಾ ಅವರು ದೆಹಲಿ ಪೊಲೀಸರಿಗೆ 300 ಟ್ಯಾಬ್ಲೆಟ್ನ್ನು ವಿತರಿಸಿದರು.
ಪೊಲೀಸ್ ಪರಿಶೀಲನೆ ಬಳಿಕ ವರದಿ ಸಲ್ಲಿಕೆಯೂ ಕಾಗದರಹಿತವಾಗಲಿದೆ.
ADVERTISEMENT
ADVERTISEMENT