ವಾಟ್ಸಾಪ್ ಮತ್ತು ಇ-ಮೇಲ್ಗಳ ಮೂಲಕ ಕಳುಹಿಸಲಾಗುವ ನೋಟಿಸ್ಗಳು ಕಾನೂನುಬದ್ಧವಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ವಾಟ್ಸಾಪ್ ಮೂಲಕ ಪ್ರತಿವಾದಿಗಳಿಗೆ ಕಳುಹಿಸಲಾಗಿರುವ ನೋಟಿಸ್ ಸುಪ್ರೀಂಕೋರ್ಟ್ ನಿಯಮಗಳ ಪ್ರಕಾರ ಕಾನೂನುಬದ್ಧವಲ್ಲ ಮತ್ತು ಪ್ರತಿವಾದಿಗಳಿಗೆ ಹೊಸದಾಗಿ ನೋಟಿಸ್ ಕಳುಹಿಸುವಂತೆ
ಅರ್ಜಿದಾರ ಪರ ವಕೀಲರಿಗೆ ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ಪವನೇಶ್ ಡಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಕಚೇರಿ ವರದಿ ಪ್ರಕಾರ ಎರಡನೇ ಮತ್ತು ಮೂರನೇ ಪ್ರತಿವಾದಿಗಳಿಗೆ ಇ-ಮೇಲ್ ಮೂಲಕ ಕಳುಹಿಸಲಾಗಿರುವ ನೋಟಿಸ್ ಸುಪ್ರೀಂಕೋರ್ಟ್ ನಿಯಮಗಳ ಪ್ರಕಾರ ಮಾನ್ಯವಲ್ಲ ಮತ್ತು ಅರ್ಜಿದಾರರ ಪರ ವಕೀಲರಿಗೆ ಮುಂದಿನ ಕ್ರಮಕೈಗೊಳ್ಳಲು 2 ವಾರಗಳ ಸಮಯಾವಕಾಶ ನೀಡಲಾಗಿದೆ
ಎಂದು ರಿಜಿಸ್ಟ್ರಾರ್ ಹೆಚ್ ಶಶಿಧರ ಶೆಟ್ಟಿ ಅವರು ಪ್ರತ್ಯೇಕ ಆದೇಶದಲ್ಲಿ ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ನಿಯಮಗಳನ್ನು ಉಲ್ಲೇಖಿಸಿ ಸುಪ್ರೀಂಕೋರ್ಟ್ನ ರಿಜಿಸ್ಟ್ರಾರ್ಗಳು ನೀಡಿರುವ ಈ ಆದೇಶ ಮಹತ್ವ ಪಡೆದಿದೆ.
– 2017ರಲ್ಲಿ ದೆಹಲಿಯ ರೋಹಿಣಿ ಕೋರ್ಟ್ ಪ್ರತಿವಾದಿಗಳಿಗೆ ವಾಟ್ಸಾಪ್ ಮೂಲಕ ಕಳುಹಿಸಿದ್ದ ನೋಟಿಸ್ ಮಾನ್ಯ ಎಂದು ಆದೇಶಿಸಿತ್ತು. ವಾಟ್ಸಾಪ್ನಲ್ಲಿ ಕಳುಹಿಸಿದ್ದ ನೋಟಿಸ್ ತಲುಪಿದೆ ಎಂದು ಸಾಬೀತುಪಡಿಸಲು ಅರ್ಜಿದಾರ ಪರ ವಕೀಲರು ಪ್ರತಿವಾದಿಗಳ ವಾಟ್ಸಾಪ್ನಲ್ಲಿ ಆಗಿದ್ದ ಬ್ಲೂ ಟಿಕ್ ಮಾರ್ಕ್ನ್ನು ದಾಖಲೆಯಾಗಿ ಸಲ್ಲಿಸಿದ್ದರು.
– 2018ರಲ್ಲಿ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ನ ಜಿ ಎಸ್ ಪಟೇಲ್ ಅವರು ವಾಟ್ಸಾಪ್ ಮೂಲಕ ಕಳುಹಿಸಲಾಗಿದ್ದ ನೋಟಿಸ್ನ ಪಿಡಿಎಫ್ನ್ನು ಸ್ವೀಕರಿಸದಲ್ಲದೇ ಅದನ್ನು ತೆರೆದು ನೋಡಿದ್ದಾರೆ ಎಂದು ಅಂಶವನ್ನು ಪರಿಗಣಿಸಿ ವಾಟ್ಸಾಪ್ ಮೂಲಕ ಕಳುಹಿಸಿದ್ದ ನೋಟಿಸ್ ಮಾನ್ಯ ಎಂದು ಅಭಿಪ್ರಾಯಪಟ್ಟಿದ್ದರು.
ದೆಹಲಿ ಹೈಕೋರ್ಟ್, ಪಂಜಾಬ್-ಹರಿಯಾಣ ಹೈಕೋರ್ಟ್, ಕೇರಳ ಹೈಕೋರ್ಟ್ಗಳು ಬೇರೆ ಬೇರೆ ಪ್ರಕರಣಗಳಲ್ಲಿ ವಾಟ್ಸಾಪ್ ಮತ್ತು ಇ-ಮೇಲ್ ಮೂಲಕ ಕಳುಹಿಸಲಾದ ವಾಟ್ಸಾಪ್ ಸಂದೇಶ ಮಾನ್ಯ ಎಂದು ಆದೇಶಿಸಿದ್ದವು.
ADVERTISEMENT
ADVERTISEMENT