ಲೋಕಸಭೆಯೊಳಗೆ ನುಗ್ಗಿ ಹೊಗೆ ದಾಳಿ ನಡೆಸಿದ್ದ ಮೈಸೂರು ಮೂಲದ ಮನೋರಂಜನ್ ಡಿ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಸಂಸದ ಪ್ರತಾಪ್ ಸಿಂಹ ಅವರು ಮಾಹಿತಿ ನೀಡಿದ್ದಾರೆ.
ಕೃತ್ಯ ನಡೆದ ಬಳಿಕ ಲೋಕಸಭಾ ಸ್ಪೀಕರ್ ಅವರಿಗೆ ವಿವರಣೆ ನೀಡಿರುವ ಸಿಂಹ, ಮನೋರಂಜನ್ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಲೋಕಸಭಾ ವೀಕ್ಷಕರ ಪಾಸ್ಗಾಗಿ ಮನೋರಂಜನ್ ನಿರಂತರವಾಗಿ ಪ್ರತಾಪ್ ಸಿಂಹ ಆಪ್ತ ಸಹಾಯಕನ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದರು.
ಉತ್ತರಪ್ರದೇಶದ ಲಕ್ನೋದಲ್ಲಿ ಆಟೋ ಓಡಿಸ್ತಿದ್ದ ಯುವಕ ಸಾಗರ್ ಶರ್ಮಾಗೂ ಕೂಡಾ ಪ್ರತಾಪ್ ಸಿಂಹ ಅವರ ಶಿಫಾರಸ್ಸಿನಲ್ಲೇ ಪಾಸ್ ಮಂಜೂರಾಗಿತ್ತು. ಇವರಿಬ್ಬರೂ ಲೋಕಸಭೆಯೊಳಗೆ ಹೊಗೆ ಹಬ್ಬಿಸಿದ್ದರು.
ಲೋಕಸಭೆಯ ನಿಯಮಗಳ ಪ್ರಕಾರ ವೀಕ್ಷಕರ ಗ್ಯಾಲರಿಗೆ ಪಾಸ್ ನೀಡಿದರೆ ಆಗ ಸಂಸದರೇ ನೇರ ಹೊಣೆಗಾರರು.
ಸಂಸದರು ಯಾರಿಗೆ ಪಾಸ್ ಕೊಡಬಹುದು..?:
ವೀಕ್ಷಕರರಿಗೆ ಪಾಸ್ಗಾಗಿ ಅರ್ಜಿ ಸಲ್ಲಿಸುವ ವೇಳೆ ಅಂತಹ ಸಂಸದರು ಸ್ವಯಂ ಘೋಷಣೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ಮೇಲ್ಕಂಡ ವ್ಯಕ್ತಿಯೂ ನನ್ನ ಸಂಬಂಧಿ/ನನ್ನ ಪರಿಯಚಸ್ಥ/ನನಗೆ ಚೆನ್ನಾಗಿ ಚಿರಪರಿಚಿತ ಮತ್ತು ಆತ ಅಥವಾ ಆಕೆಯ ಸಂಪೂರ್ಣ ಜವಾಬ್ದಾರಿಯನ್ನು ನಾನೇ ವಹಿಸಿಕೊಳ್ಳುತ್ತೇನೆ ಎಂದು ಘೋಷಿಸಿಕೊಳ್ಳಬೇಕಾಗುತ್ತದೆ.
ಜೊತೆಗೆ ಆ ರೀತಿ ಪಾಸ್ ಪಡೆಯುವವರು ತಮ್ಮ ಗಂಡ ಅಥವಾ ತಂದೆಯ ಪೂರ್ಣ ಹೆಸರನ್ನು ನೀಡಬೇಕಾಗುತ್ತದೆ. ಅನುಮತಿಸಲಾದ ಕಲಾಪಕ್ಕೆ ಬರುವುದಕ್ಕೆ 16 ಗಂಟೆ ಮೊದಲು ಸಂಸತ್ತಿನ ಕೇಂದ್ರೀಕೃತ ಪಾಸ್ ವಿತರಣಾ ಘಟಕದಿಂದ ಪಾಸ್ ವಿತರಣೆ ಆಗುತ್ತದೆ. ವೀಕ್ಷಕರ ಗ್ಯಾಲರಿಗೆ ನಿಗದಿತ ಅವಧಿಗೆ, ನಿಗದಿತ ದಿನಾಂಕಕ್ಕೆ ಮಾತ್ರ ಪಾಸ್ಗಳನ್ನು ನೀಡಲಾಗುತ್ತದೆ.
ADVERTISEMENT
ADVERTISEMENT