ADVERTISEMENT
ಸಂಸತ್ ಭವನಕ್ಕೆ ನುಗ್ಗಿ ಭದ್ರತಾ ಲೋಪ ಎಸಗಿದ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಇವರಲ್ಲಿ ಮೈಸೂರು ನಗರದ ವಿಜಯನಗರ ಮನೋರಂಜನ್ ಕೂಡಾ ಒಬ್ಬ.
ಕೆಲವು ದಿನಗಳ ಹಿಂದೆಯಷ್ಟೇ ಮನೋರಂಜನ್ ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರ ಆಪ್ತ ಸಿಬ್ಬಂದಿಯನ್ನು ಭೇಟಿಯಾಗಿ ಡಿಸೆಂಬರ್ 14ರಂದು ಲೋಕಸಭಾ ಕಲಾಪ ವೀಕ್ಷಿಸಲು ವೀಕ್ಷಕರ ಗ್ಯಾಲರಿಯ ಪಾಸ್ ಕೊಡಿಸುವಂತೆ ಕೇಳಿಕೊಂಡಿದ್ದ.
ಆದರೆ ಮಂಗಳವಾರ ಅಂದರೆ ಡಿಸೆಂಬರ್ 12ರಂದು ಮನೋರಂಜನ್ಗೆ ಕರೆ ಮಾಡಿದ್ದ ಸಂಸದರ ಆಪ್ತ ಸಿಬ್ಬಂದಿ ಡಿಸೆಂಬರ್ 14ರ ಬದಲು ಡಿಸೆಂಬರ್ 13ರ ಪಾಸ್ನ್ನು ತೆಗೆದುಕೊಂಡು ಹೋಗುವಂತೆ ಹೇಳಿದ್ದರು.
ಅಂದರೆ ಡಿಸೆಂಬರ್ 14 ಅಂದರೆ ಸಂಸತ್ ಭವನದೊಳಗೆ ನುಗ್ಗಿ ನಿನ್ನೆ ಮಾಡಿದ್ದ ಕೃತ್ಯವನ್ನು ಇವತ್ತು ಮಾಡಲು ನಿರ್ಧರಿಸಿದ್ದರು. ಆದರೆ ಡಿಸೆಂಬರ್ 13ರ ದಿನದ ಪಾಸ್ ಸಿಕ್ಕಿದ್ದರಿಂದ ನಿನ್ನೆ ಬೆಳಗ್ಗೆ ತಮ್ಮ ಗೆಳೆಯ ವಿಕ್ಕಿ ಮನೆಯಿಂದ ಟ್ಯಾಕ್ಸಿ ಮೂಲಕ ಸಂಸತ್ ಭವನಕ್ಕೆ ಬಂದರು. ಮನೋರಂಜನ್ ಮತ್ತು ಸಾಗರ್ ಶರ್ಮಾ ಲೋಕಸಭೆಯೊಳಗೆ ಹೋದರೆ, ಲಲಿತ್ ಝಾ, ನೀಲಿಂ ಯಾದವ್ ಆಜಾದ್ ಮತ್ತು ಅಮೋಲ್ ಶಿಂಧೆ ಸಂಸತ್ ಆವರಣದಲ್ಲಿ ಹೊರಗೆ ಕಾಯುತ್ತಿದ್ದರು.
ಕಾಕತಾಳೀಯ ಎಂಬಂತೆ ನಿನ್ನೆಗೆ 2001ರಲ್ಲಿ ಸಂಸತ್ ಭವನದ ಮೇಲೆ ಭಯೋತ್ಪಾದಕ ದಾಳಿ ನಡೆದು 22 ವರ್ಷ ಪೂರೈಸಿತ್ತು.
ADVERTISEMENT