ಲೋಕಸಭೆಯಲ್ಲಿ ಭದ್ರತಾ ಲೋಪದ ಬಳಿಕ ದೇಶದಲ್ಲಿ ಬುಧವಾರದಿಂದ ಹೆಚ್ಚು ಕೇಳಿಬರುತ್ತಿರುವ ಸಂಸದನ ಹೆಸರೇ ಪ್ರತಾಪ್ ಸಿಂಹ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಎರಡನೇ ಬಾರಿಗೆ ಆಯ್ಕೆ ಆಗಿರುವ ಬಿಜೆಪಿ ಯುವ ನಾಯಕ.
2024ಕ್ಕೆ ಮೂರನೇ ಬಾರಿಯೂ ಪಕ್ಷದಿಂದ ಟಿಕೆಟ್ ಬಯಸುತ್ತಿರುವ ಪ್ರತಾಪ್ ಸಿಂಹ ಅವರು ಕಳೆದ ತಿಂಗಳಷ್ಟೇ ಸಂಖ್ಯಾಶಾಸ್ತ್ರದ ಪ್ರಕಾರ ಹೆಸರಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದ್ದಾರೆ.
ಇಂಗ್ಲೀಷ್ನಲ್ಲಿ Pratap Simha ಎಂದು ಬರೆಯಲಾಗ್ತಿತ್ತು. ಅದನ್ನು Pratap Simmha ಎಂದು ಬದಲಾಯಿಸಿಕೊಂಡಿದ್ದರು. Simha ಪದದಲ್ಲಿ ಹೆಚ್ಚುವರಿಯಾಗಿ ಇಂಗ್ಲೀಷ್ನ ಸ್ಮಾಲ್ ಲೆಟರ್ mನ್ನು ಸೇರಿಸಿಕೊಂಡಿದ್ದರು.
ಹೆಸರಿನ ಬರವಣೆಯಲ್ಲಿ ಮಾಡಿಕೊಂಡಿರುವ ಬದಲಾವಣೆ ಬಗ್ಗೆ ಕಾನೂನು ಪ್ರಕಾರ ಅಫಿಡವಿಟ್ ಸಲ್ಲಿಸಿ ಆ ಬಗ್ಗೆ ನಿಯಮಗಳಂತೆ ಜಾಹೀರಾತು ಮೂಲಕ ಪ್ರಕಸಿದ್ದರು.
ಆದರೆ ಕನ್ನಡದಲ್ಲಿ ಪ್ರತಾಪ್ ಸಿಂಹ ಬದಲಾಯಿಸಿಕೊಂಡಿರಲಿಲ್ಲ.
ಹೆಚ್ಚುವರಿ ಸ್ಮಾಲ್ m ಸೇರಿಸಿದ್ದರಿಂದ ತಮ್ಮ ಅದೃಷ್ಟ ಬದಲಾಗುತ್ತದೆ ಮತ್ತು ಆ ಮೂಲಕ ತಾವು ಎದುರಿಸುವ 3ನೇ ಲೋಕಸಭಾ ಚುನಾವಣೆಗೆ ಒಳ್ಳೆದಾಗುತ್ತದೆ ಎಂಬ ಅಲೋಚನೆಯಲ್ಲಿದ್ದರು.
ಆದರೆ ಸಂಸತ್ತಿನ ಹೊಸ ಕಟ್ಟಡದಲ್ಲಿ ನಿನ್ನೆ ಆಗಿರುವ ಘಟನೆ ನೇರವಾಗಿ ಸಂಸದ ಪ್ರತಾಪ್ ಸಿಂಹ ಇಮೇಜ್ಗೆ ಏಟು ಕೊಟ್ಟಿದೆ.
ಲೋಕಸಭೆಯೊಳಗೆ ಕೃತ್ಯ ಎಸಗಿದ ಸಾಗರ್ ಶರ್ಮಾ ಮತ್ತು ಮನೋರಂಜನ್ಗೆ ವೀಕ್ಷಕರ ಗ್ಯಾಲರಿ ಪಾಸ್ ನೀಡಿದ್ದೇ ಪ್ರತಾಪ್ ಸಿಂಹ. ನಿಯಮಗಳ ಪ್ರಕಾರ ವೀಕ್ಷಕರ ಗ್ಯಾಲರಿಗೆ ಪಾಸ್ ನೀಡುವಾಗ ಸಂಸದರೇ ನೇರವಾಗಿ ಜವಾಬ್ದಾರರಾಗಿರುತ್ತಾರೆ.
ಲೋಕಸಭೆ ಮತ್ತು ಸಂಸತ್ ಆವರಣದಲ್ಲಿ ನಿನ್ನೆ ನಡೆದಿರುವ ಕೃತ್ಯ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಹೋರಾಟಕ್ಕೆ ವಿಪಕ್ಷಗಳಿಗೆ ಅಸ್ತ್ರವನ್ನು ನೀಡಿದೆ. ಸಂಸತ್ತಿನ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡು ಪಾಸ್ ನೀಡಿರುವ ಪ್ರತಾಪ್ ಸಿಂಹರನ್ನು ಸಂಸದ ಸ್ಥಾನದಿಂದ ಅಮಾನತು ಮಾಡುವಂತೆ ವಿಪಕ್ಷಗಳು ಆಗ್ರಹಿಸಿವೆ.