ಲೋಕಸಭೆಯೊಳಗೆ ಬುಧವಾರ ಆಗಿರುವ ಭದ್ರತಾ ಲೋಪ ಸಂಬಂಧ ಲೋಕಸಭೆಯ ಎಂಟು ಮಂದಿ ಭದ್ರತಾ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರ ಆದೇಶದ ಮೇರೆಗೆ 8 ಸಿಬ್ಬಂದಿ ಅಮಾನತುಗೊಳಿಸಿ ಲೋಕಸಭಾ ಕಾರ್ಯಾಲಯ ಆದೇಶ ಹೊರಡಿಸಿದೆ.
ರಾಮ್ಪಾಲ್, ಅರವಿಂದ್, ವೀರ್ದಾಸ್, ಗಣೇಶ್, ಅನಿಲ್, ಪ್ರದೀಪ್, ವಿಮಿತ್ತ್ ಮತ್ತು ನರೇಂದ್ರ ಅಮಾನತ್ತಾದ 8 ಮಂದಿ ಸಿಬ್ಬಂದಿ.
ಲೋಕಸಭೆ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಮನೋರಂಜನ್ ಮತ್ತು ಸಾಗರ್ ಶರ್ಮಾ ಇಬ್ಬರೂ ಏಕಾಏಕಿ ಸಂಸದರ ಆಸನದತ್ತ ನುಗ್ಗಿ ಹೊಗೆ ಹಬ್ಬಿಸಿದ್ದರು. ಕೃತ್ಯ ಸಂಬಂಧ ಇವರಿಬ್ಬರಲ್ಲದೇ ನೀಲಂ ಯಾದವ್, ಅಮೋಲ್ ಶಿಂಧೆ, ವಿಶಾಲ್ ಶರ್ಮಾನನ್ನು ಬಂಧಿಸಲಾಗಿದೆ.