ಭಾರತದಲ್ಲಿ ಪಾಕಿಸ್ತಾನ ಸರ್ಕಾರದ ಟ್ವಿಟರ್ ಖಾತೆ ಬ್ಯಾನ್

ಭಾರತದಲ್ಲಿ ಪಾಕಿಸ್ತಾನ ಸರ್ಕಾರದ ಅಧಿಕೃತ ಟ್ವಿಟರ್ ಖಾತೆಯನ್ನು ಟ್ವಿಟರ್ ಸಂಸ್ಥೆ ಹಿಂದಕ್ಕೆ ಪಡೆದುಕೊಂಡಿದೆ. ಪಾಕಿಸ್ತಾನದ ಟ್ವಿಟರ್ ಖಾತೆ ಇನ್ನು ಮುಂದೆ ಭಾರತದಲ್ಲಿ ಲಭ್ಯವಿರುವುದಿಲ್ಲ.

ಕೇಂದ್ರ ಸರ್ಕಾರದ ಸೂಚನೆಗೆ ಮೇರೆಗೆ ಟ್ವಿಟರ್ ಸಂಸ್ಥೆ ಭಾರತದಲ್ಲಿನ ಪಾಕಿಸ್ತಾನದ ಟ್ವಿಟರ್ ಖಾತೆಯನ್ನು ಬ್ಯಾನ್ ಮಾಡಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : Pakistan : ಇಬ್ಬರು ಬಾಲಕಿಯರು, ಒಬ್ಬ ಹಿಂದೂ ಮಹಿಳೆಯ ಅಪಹರಿಸಿ ಮತಾಂತರ

ವಿದೇಶಿಗಳಲ್ಲಿ ಪಾಕಿಸ್ತಾನದ ಈ ಟ್ವಿಟರ್ ಖಾತೆಯನ್ನು ಕಾರ್ಯನಿರ್ವಹಿಸಲಿದೆ.

ಇತ್ತೀಚೆಗಷ್ಟೆ ಕೇಂದ್ರ ಸರ್ಕಾರ ಪಿಎಫ್​ಐ ಸೇರಿದಂತೆ ಹಲವು ಸಂಸ್ಥೆಗಳನ್ನು ಬ್ಯಾನ್ ಮಾಡಿತ್ತು. ಆ ಬೆನ್ನಲ್ಲೇ, ಟ್ವಿಟರ್ ಸಂಸ್ಥೆ ಈ ಸಂಸ್ಥೆಗಳ ಖಾತೆಗಳನ್ನು ಟ್ವಿಟರ್​​ನಿಂದ ತೆಗೆದುಗಹಾಕಿತ್ತು.