Pakistan : ಇಬ್ಬರು ಬಾಲಕಿಯರು, ಒಬ್ಬ ಹಿಂದೂ ಮಹಿಳೆಯ ಅಪಹರಿಸಿ ಮತಾಂತರ

Forced conversion

ಪಾಕಿಸ್ತಾನದಲ್ಲಿ ಸಿಂಧ್ ಪ್ರಾಂತ್ಯದಲ್ಲಿ ಅಲ್ಪಸಂಖ್ಯಾತರಾದ ಹಿಂದೂ ಮಹಿಳೆ ಮತ್ತು ಇಬ್ಬರು ಬಾಲಕಿಯರನ್ನು ಅಪಹರಿಸಲಾಗಿದ್ದು, ಅವರಲ್ಲಿ ಇಬ್ಬರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ, ಮದುವೆ ಮಾಡಲಾಗಿದೆ.

ಮೀನಾ ಮೇಘವಾರ್ (14) ಎಂಬ ಬಾಲಕಿಯನ್ನು ನಾಸರ್‌ಪುರ ಪ್ರದೇಶದಿಂದ ಅಪಹರಿಸಲಾಗಿದೆ. ಮೀರ್‌ಪುರ್‌ಖಾಸ್‌ ಪಟ್ಟಣದ ಮಾರುಕಟ್ಟೆಯಿಂದ ಮನೆಗೆ ಹಿಂದಿರುಗುತ್ತಿದ್ದ ಮತ್ತೊಬ್ಬ ಬಾಲಕಿಯನ್ನೂ ಅಪಹರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೊಂದು ಕಡೆ, ವಿವಾಹಿತ ಹಿಂದೂ ಮಹಿಳೆಯೊಬ್ಬರು ಮೀರ್‌ಪುರ್‌ಖಾಸ್‌ನಿಂದ ಕಾಣೆಯಾಗಿದ್ದು, ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ನಂತರ ಅವರು ಮುಸ್ಲಿಂ ವ್ಯಕ್ತಿಯನ್ನು ವಿವಾಹವಾಗಿದ್ದಾರೆ. ಮಹಿಳೆಗೆ ಮೂರು ಮಕ್ಕಳಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ : Asia Cup : ಪಾಕಿಸ್ತಾನ ತಂಡ ಬೆಂಬಲಿಸಿ ಪೋಸ್ಟ್ : ಕೋಲಾರದ ವ್ಯಕ್ತಿ ಬಂಧನ

ಈ ಸಂಬಂಧ ಮಹಿಳೆಯ ಪತಿ ರವಿ ಕುರ್ಮಿ ಅವರು ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಲು ಪೊಲೀಸರು ನಿರಾಕರಿಸಿದ್ದಾರೆ ಎನ್ನಲಾಗಿದೆ. ನೆರೆಯ ಅಹ್ಮದ್ ಚಾಂಡಿಯೊ ಎಂಬಾತ ತನ್ನ ಪತ್ನಿಗೆ ಹಿಂಸೆ ನೀಡುತ್ತಿದ್ದ. ಬಲವಂತವಾಗಿ ಅಪಹರಿಸಿ ಇಸ್ಲಾಂಗೆ ಮತಾಂತರಿಸಿದ್ದಾನೆ ಎಂದು ರವಿ ಆರೋಪಿಸಿದ್ದಾರೆ.

ಮೂರೂ ಪ್ರಕರಣಗಳನ್ನೂ ತನಿಖೆ ಮಾಡಲಾಗುತ್ತಿದೆ ಎಂದು ಮೀರ್‌ಪುರ್‌ಖಾಸ್‌ ಪೊಲೀಸರು ತಿಳಿಸಿದ್ದಾರೆ.

ವಿವಾಹಿತ ಮಹಿಳೆ ರಾಖಿ ತನ್ನ ಸ್ವಂತ ಇಚ್ಛೆಯ ಮೇರೆಗೆ ಮತಾಂತರಗೊಂಡಿರುವುದಾಗಿಯೂ, ಮುಸ್ಲಿಂ ಪುರುಷನನ್ನು ಮದುವೆಯಾಗಿರುವುದಾಗಿಯೂ ಹೇಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ : ಪಾಕಿಸ್ತಾನದ ಖ್ಯಾತ ಅಂಪೈರ್ ಈಗ ಶೂ, ಬಟ್ಟೆ ವ್ಯಾಪಾರಿ

LEAVE A REPLY

Please enter your comment!
Please enter your name here