ಚೀನಾದ ಮೊಬೈಲ್​ ಕಂಪನಿಯಿಂದ ಭಾರತಕ್ಕೆ 4,389 ಕೋಟಿ ಸುಂಕ ವಂಚನೆ ಆರೋಪ

ಚೀನಾ ಮೂಲದ ಮೊಬೈಲ್​ ತಯಾರಿಕಾ ಕಂಪನಿ ಒಪ್ಪೋ ಭಾರತಕ್ಕೆ 4,389 ಕೋಟಿ ರೂಪಾಯಿ ಸುಂಕ ವಂಚನೆ ಮಾಡಿದೆ ಎಂದು ಆರೋಪಿಸಿರುವ ಆದಾಯ ಗುಪ್ತಚರ ನಿರ್ದೇಶನಾಲಯ ನೋಟಿಸ್​ ಜಾರಿ ಮಾಡಿದೆ.

ಓಪ್ಪೋ ಇಂಡಿಯಾ ಭಾರತದಲ್ಲಿ ಚೀನಾ ಸಹವರ್ತಿ ಕಂಪನಿಯಾಗಿದ್ದು ಓಪ್ಪೋ, ಒನ್​ಪ್ಲಸ್​ ಮತ್ತು ರಿಯಲ್​ಮೀ ಮೊಬೈಲ್​ಗಳನ್ನು ಉತ್ಪಾದಿಸುತ್ತಿದೆ.

ಕಂಪನಿ ಮತ್ತು ಕಂಪನಿಯ ಅಧಿಕಾರಿಗಳ ಕಚೇರಿ ಮತ್ತು ನಿವಾಸಗಳಲ್ಲಿ ಕೈಗೊಳ್ಳಲಾದ ದಾಳಿಯ ವೇಳೆ ಸಿಕ್ಕ ದಾಖಲೆಗಳ ಪ್ರಕಾರ ಕಂಪನಿಯೂ ಮೊಬೈಲ್​ ತಯಾರಿಕೆಗೆ ಬೇಕಾದ ಬಿಡಿಭಾಗಗಳ ಆಮದಿನ ವೇಳೆ ಸುಳ್ಳು ಮಾಹಿತಿಯನ್ನು ನೀಡಿ 2,981 ಕೋಟಿ ರೂಪಾಯಿ ಸುಂಕ ವಿನಾಯಿತಿ ಪಡೆದಿದೆ.

ಜೊತೆಗೆ ರಾಯಲ್ಟಿ ಮತ್ತು ಪರವಾನಿಗೆ ಶುಲ್ಕ ಮೂಲಕವೂ 1,408 ಕೋಟಿ ರೂಪಾಯಿ ಸುಂಕವನ್ನು ವಂಚಿಸಿದೆ ಎಂದು ಆದಾಯ ಗುಪ್ತಚರ ನಿರ್ದೇಶನಾಲಯ ಹೇಳಿದೆ.

LEAVE A REPLY

Please enter your comment!
Please enter your name here