ADVERTISEMENT
ಧಾರಾಕಾರ ಮಳೆಯಿಂದಾಗಿ ಮಂಗಳೂರಲ್ಲಿ ಕಡಲ ಕೊರತಕ್ಕೆ ಕಾಂಕ್ರಿಟ್ ರಸ್ತೆಯೇ ಕೊಚ್ಚಿಕೊಂಡು ಹೋಗಿದೆ.
ಸಮುದ್ರ ತೀರದಿಂದ ತುಸು ದೂರದಲ್ಲಿ ನಿರ್ಮಿಸಲಾಗಿದ್ದ ಕಾಂಕ್ರಿಟ್ ರಸ್ತೆ ಸಮುದ್ರದ ಅಲೆ ಹೊಡೆತಕ್ಕೆ ಕೊಚ್ಚಿಕೊಂಡು ಹೋಗಿದೆ.
ಈ ಕಾಂಕ್ರಿಟ್ ರಸ್ತೆಯ ಪಕ್ಕದಲ್ಲೇ ಹಲವು ಮನೆಗಳಿದ್ದು ಅವೂ ಸಮುದ್ರದ ಅಲೆಗೆ ಬೀಳುವ ಆತಂಕ ಎದುರಾಗಿದೆ.
ಫಲ್ಗುಣಿ ನದಿ ಸಮೀಪದ ಕೂಲೂರಲ್ಲಿರುವ ಕೆಪಿಟಿಸಿಎಲ್ ಟವರ್ ಉರುಳಿಬಿದ್ದಿದ್ದು ಕಾವೂರಿನಿಂದ ಸರಬರಾಜು ಆಗುತ್ತಿದ್ದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಕೋಡಿಯಾಳ್ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ಕಾಡುತ್ತಿದೆ.
ADVERTISEMENT