ತೆಲಂಗಾಣ ಆಪರೇಷನ್ ಕಮಲ – ಪೊಲೀಸ್ ರಿಮ್ಯಾಂಡ್ ರಿಪೋರ್ಟ್ ನಲ್ಲಿ ಕರ್ನಾಟಕದ ಲಿಂಕ್..!

ತೆಲಂಗಾಣದಲ್ಲಿ ರಾಜಕೀಯ ಕಂಪನಕ್ಕೆ ಕಾರಣವಾಗಿರುವ ಆಪರೇಷನ್ ಕಮಲಕ್ಕೆ ಸಂಬಂಧಿಸಿದ ರಿಮ್ಯಾಂಡ್ ರಿಪೋರ್ಟ್ ನಲ್ಲಿ ಪೊಲೀಸರು ಸ್ಪೋಟಕ ವಿಚಾರಗಳನ್ನು ಬಯಲು ಮಾಡಿದ್ದಾರೆ. ಟಿ ಆರ್ ಎಸ್ ಸರ್ಕಾರ ಅಸ್ಥಿರಗೊಳಿಸಲು ಶಾಸಕರ ಖರೀದಿಗೆ ಮೂವರು ಮುಂದಾಗಿದ್ದರು ಎಂದು ಉಲ್ಲೇಖಿಸಿದೆ. ಈ ಪ್ರತ್ಯೇಕ ಆಪರೇಷನ್ ನಲ್ಲಿ ನಾಲ್ಕು ರಹಸ್ಯ ಕ್ಯಾಮೆರಾ, ಎರಡು ವಾಯ್ಸ್ ರೆಕಾರ್ಡರ್ ಗಳನ್ನು ಬಳಕೆ ಮಾಡಿರುವುದಾಗಿ ಕೋರ್ಟ್ ಗೆ ತಿಳಿಸಿದೆ.

ಸ್ಪೆಷಲ್ ಆಪರೇಷನ್ ಗೆ ತಯಾರಿ:

ಬೆಳಗ್ಗೆ 11.30 ಗಂಟೆಗೆ ಶಾಸಕ ರೋಹಿತ್ ರೆಡ್ಡಿ ಪೊಲೀಸರಿಗೆ ದೂರು ನೀಡಿದರು. ಮೂವರು ವ್ಯಕ್ತಿಗಳು ತಮಗೆ ನೂರು ಕೋಟಿ ಕೊಡ್ತೀವಿ.. ಟಿ ಆರ್ ಎಸ್ ಪಕ್ಷವನ್ನು, ಸರ್ಕಾರವನ್ನು ಅಸ್ಥಿರ ಮಾಡಿ ಎಂದು ಆಫರ್ ನೀಡಿದ್ದಾರೆ. ಆದರೆ, ಇದು ಅನೈತಿಕ ಮತ್ತು ಕಾನೂನು ಬಾಹಿರ ಕೃತ್ಯವಾದ ಕಾರಣ ನಾನು ಇದನ್ನು ಒಪ್ಪಿಲ್ಲ. ಕೂಡಲೇ ನೀವು ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿದರು. ಇದರ ಆಧಾರದ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿದೆವು.

ರೋಹಿತ್ ರೆಡ್ಡಿ ಫಾರ್ಮ್ ಹೌಸ್ ಎಂಬ ಅಡ್ಡಾದಲ್ಲಿ

ಪೈಲೇಟ್ ರೋಹಿತ್ ರೆಡ್ಡಿ ಫಾರ್ಮ್ ಹೌಸ್ ನ ಮೀಟಿಂಗ್ ಹಾಲ್ ನಲ್ಲಿ ನಾಲ್ಕು ರಹಸ್ಯ ಕ್ಯಾಮೆರಾ ಫಿಕ್ಸ್ ಮಾಡಿದೆವು. ರೋಹಿತ್ ರೆಡ್ಡಿಯ ಕುರ್ತಾ ಜೇಬಿನಲ್ಲಿ ಎರಡು ವಾಯ್ಸ್ ರೆಕಾರ್ಡರ್ ಇರಿಸಿದ್ವಿ. ಮೊದಲೇ ಪ್ಲಾನ್ ಮಾಡಿದಂತೆ ಮಧ್ಯಾಹ್ನ 3.05ಕ್ಕೆ ಕ್ಯಾಮೆರಾ ಆನ್ ಮಾಡಿದೆವು. ಮಧ್ಯಾಹ್ನ 3.10ಕ್ಕೆ ಆರೋಪಿಗಳು ರೋಹಿತ್ ರೆಡ್ಡಿ ಜೊತೆ ಬಂದರು. ಸಂಜೆ 4.10ಗಂಟೆಯವರೆಗೆ ಶಾಸಕರಾದ ಗುವ್ವೆಲ ಬಾಲರಾಜು, ಹರ್ಷವರ್ಧನ್, ರೇಗಾ ಕಾಂತಾರಾವ್ ಬಂದರು. ಸುಮಾರು ಮೂರುವರೆ ಗಂಟೆ ಚರ್ಚೆಗಳು ನಡೆದವು.

ಎಳನೀರು ತಗೊಂಡು ಬಾ.. ರೇಡ್ ಕೋಡ್ ವರ್ಡ್ :

ನಾವು ಮೊದಲೇ ರೋಹಿತ್ ರೆಡ್ಡಿಗೆ ಯಾವ ರೀತಿಯ ಸಿಗ್ನಲ್ ಕೊಡಬೇಕು ಎಂದು ಹೇಳಿದ್ದೆವು. ಮೀಟಿಂಗ್ ಮುಗಿದ ಮೇಲೆ ಎಳ ನೀರು ಬೇಕು ಎಂದು ಸಹಾಯಕರಿಗೆ ಹೇಳಿ.. ನಾವು ಎಂಟ್ರಿ ಕೊಡುತ್ತೇವೆ ಎಂದು ಹೇಳಿದ್ದೆವು. ಅದರಂತೆ ರೋಹಿತ್ ರೆಡ್ಡಿ ಎಳ ನೀರು ಕೇಳಿದ ಕೂಡಲೇ ನಾವು ಎಂಟ್ರಿ ಕೊಟ್ಟೆವು. ಮೂವರು ಆರೋಪಿಗಳು ಸೈಲೆಂಟ್ ಆಗಿದ್ದರು. ನಾವು ಅವರ ಫೋನ್ ಸೀಜ್ ಮಾಡಿದೆವು. ರಹಸ್ಯ ಕ್ಯಾಮೆರಾ, ವಾಯ್ಸ್ ರೆಕಾರ್ಡರ್ ವಶಕ್ಕೆ ಪಡೆದೆವು. ಅಲ್ಲಿಯೇ ವಾಯ್ಸ್ ರೆಕಾರ್ಡರ್ ಆನ್ ಮಾಡಿದಾಗ ಸಂಭಾಷಣೆ ತುಂಬಾ ಸ್ಪಷ್ಟವಾಗಿ ಕೇಳಿಬಂದಿದ್ದು, ಅಲ್ಲದೆ ಪೂರ್ತಿ ರೆಕಾರ್ಡ್ ಆಗಿರೋದನ್ನು ಖಚಿತ ಪಡಿಸಿಕೊಂಡೆವು.

50 ಕೋಟಿ ಆಫರ್.. ಕರ್ನಾಟಕ ಲಿಂಕ್..:

ಒಬ್ಬೊಬ್ಬ ಎಮ್ ಎಲ್ ಎ ಗೆ 50 ಕೋಟಿ ಕೊಡುವುದಾಗಿ ಹೇಳಿರೋದು ವಾಯ್ಸ್ ರೆಕಾರ್ಡರ್ ಸ್ಪಷ್ಟವಾಗಿ ದಾಖಲಾಗಿದೆ. ಕರ್ನಾಟಕ, ದೆಹಲಿ ಸೇರಿ ಹಲವೆಡೆ ಇದನ್ನು ಮಾಡಿದ್ದೇವೆ ಎಂದು ರಾಮಚಂದ್ರ ಭಾರತಿ ಹೇಳಿದ ವಿಚಾರ ಕೂಡ ನಮೂದು ಆಗಿದೆ.

ಸಂತೋಷ್ ಬಿಜೆಪಿ.. ಸುನೀಲ್ ಬನ್ಸಾಲ್ ಗೆ ರಾಮಚಂದ್ರ ಭಾರತಿ ಕಳಿಸಿದ ಸಂದೇಶವೇನು?

ತೆಲಂಗಾಣ ಕ್ಕೆ ಸಂಬಂಧಿಸಿದಂತೆ ಮುಖ್ಯ ವಿಷಯ ಮಾತನಾಡಬೇಕು ಎಂದು ಸುನೀಲ್ ಬನ್ಸಾಲ್ ಗೆ ರಾಮಚಂದ್ರ ಭಾರತಿ ಟೆಕ್ಸ್ಟ್ ಮೆಸ್ಸೇಜ್ ಮಾಡಿದ್ದಾರೆ. ಇದರ ಸ್ಕ್ರೀನ್ ಶಾಟ್ ಕೂಡ ಮಾಕೊಂಡಿದ್ದೇವೆ.

ಒಟ್ಟು 25ಶಾಸಕರು ಬಿಜೆಪಿ ಸೇರಲು ಸಜ್ಜಾಗಿದ್ದಾರೆ ಎಂದು ಸಂತೋಷ್ ಬಿಜೆಪಿ ಎಂಬ ಹೆಸರಿನ ನಂಬರ್ ಗೆ ತುಷಾರ್ ಗೆ ರಾಮಚಂದ್ರ ಕರೆ ಮಾಡಿ ರಾಮಚಂದ್ರ ಭಾರತಿ ಮೆಸ್ಸೇಜ್ ಕಳಿಸಿದ್ದಾರೆ.

ನಂದ ಡೈರಿ ಮತ್ತು ಆ 50 ಹೆಸರು:

ಕಾರಿನಲ್ಲಿ ಹೋಟೆಲ್ ಉದ್ಯಮಿ ನಂದಕುಮಾರ್  ಡೈರಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅದರಲ್ಲಿ 50 ಶಾಸಕರ ಹೆಸರಿದೆ. ಟಿ ಆರ್ ಎಸ್, ಕಾಂಗ್ರೆಸ್ ಶಾಸಕರ ಹೆಸರುಗಳಿವೆ. ಉಳಿದ ಮೂವರು ಪ್ರತಿನಿಧಿಗಳು ರೋಹಿತ್ ರೆಡ್ಡಿಗೆ ಸಹಕರಿಸಲಷ್ಟೇ ಬಂದಿದ್ದರು ಎಂದು ರಿಮ್ಯಾಂಡ್ ರಿಪೋರ್ಟ್ ನಲ್ಲಿ ಪೊಲೀಸರು  ತಿಳಿಸಿದ್ದಾರೆ