Notes Ban : 6 ವರ್ಷದ ಬಳಿಕ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಅಸ್ತು

Notes Ban

ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಕೇಂದ್ರದ ಬಿಜೆಪಿ ಸರ್ಕಾರದ ವಿವಾದಾತ್ಮಕ ನೋಟು ಅಮಾನ್ಯೀಕರಣ (Notes Ban) ಆದೇಶದ ವಿರುದ್ಧ ಸುಪ್ರೀಂಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ನಾಳೆ ಬುಧವಾರ ಈ ಅರ್ಜಿಗಳ ವಿಚಾರಣೆ ನಡೆಯಲಿದೆ ಎಂದು ಸುಪ್ರೀಂಕೋರ್ಟ್​ ಹೇಳಿದೆ.

6 ವರ್ಷಗಳ ನಂತರ ನೋಟು ಅಮಾನ್ಯೀಕರಣದ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಅಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್​​ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ನ್ಯಾಯಮೂರ್ತಿ ಅಬ್ದುಲ್ ನಜೀರ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ನಾಳೆ ಅರ್ಜಿಗಳ ವಿಚಾರಣೆ ನಡೆಸಲಿದೆ.

ಒಟ್ಟು ನಾಲ್ಕು ಸಾಂವಿಧಾನಿಕ ಪೀಠಗಳು ನಾಳೆ ಅಧ್ಯಕ್ಷತೆ ವಹಿಸಲಿವೆ. ಪೀಠವು ಬುಧವಾರದ ವಿಚಾರಣೆಯಲ್ಲಿ ವಿವರವಾದ ವಿಚಾರಣೆಯ ದಿನಾಂಕವನ್ನು ನಿಗದಿಪಡಿಸುವ ನಿರೀಕ್ಷೆಯಿದೆ. ಇದನ್ನೂ ಓದಿ : ಆಕ್ರಮ ಆಸ್ತಿಗಳಿಕೆ: ಶಶಿಕಲಾಗೆ ಸೇರಿದ್ದ 2 ಸಾವಿರ ಕೋಟಿ ರೂ. ಆಸ್ತಿ ಮುಟ್ಟುಗೋಲು ಹಾಕಿಕೊಂಡ ತೆರಿಗೆ ಇಲಾಖೆ

ನೋಟು ಅಮಾನ್ಯೀಕರಣದ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಬಗ್ಗೆ ಡಿಸೆಂಬರ್ 16, 2016 ರಂದು ಸಂವಿಧಾನ ಪೀಠಕ್ಕೆ ಉಲ್ಲೇಖಿಸಲಾಗಿತ್ತು. ಆದರೆ ಇದುವರೆಗೂ ವಿಚಾರಣೆಗಾಗಿ ಸಾಂವಿಧಾನಿಕ ಪೀಠ ರಚಿಸಲಾಗಿರಲಿಲ್ಲ.

ಪ್ರಧಾನಿ ನರೇಂದ್ರ ಮೋದಿಯವರು ಡಿಸೆಂಬರ್ 8, 2016 ರ ರಾತ್ರಿ ದೇಶವನ್ನುದ್ದೇಶಿಸಿ ಮಾತನಾಡಿ ನೋಟು ಅಮಾನ್ಯೀಕರಣವನ್ನು (Notes Ban) ಘೋಷಣೆ ಮಾಡಿದ್ದರು.

ಭಾರತೀಯ ರಿಸರ್ವ್​ ಬ್ಯಾಂಕ್ ಪ್ರಕಾರ ದೇಶದ ಅರ್ಥವ್ಯವಸ್ಥೆಯಲ್ಲಿ 15.41 ಲಕ್ಷ ಕೋಟಿ ಮೌಲ್ಯದ ಶೇ.99.3 ರಷ್ಟು ನೋಟುಗಳು ಅಮಾನ್ಯಗೊಂಡಿದ್ದವು.

ಇದನ್ನೂ ಓದಿ : ನೋಟ್ ಬ್ಯಾನ್ ಎಂಬ ಕರಾಳ ನೆನಪಿಗೆ ಐದು ವರ್ಷ.. ಕಪ್ಪು ಹಣ ನಿಯಂತ್ರಣಕ್ಕೆ ಬಂತಾ..? ನಕಲಿ ನೋಟು ಚಲಾವಣೆ ಕಡಿಮೆ ಆಯ್ತಾ? ಅಂಕಿ ಅಂಶ ಏನು ಹೇಳುತ್ತವೆ.?