ಇದು ತಂಬಾಕು ಜಾಹೀರಾತಲ್ಲ, ಏಲಕ್ಕಿ ಉತ್ಪನ್ನ – KSRTCಯಿಂದ ಜಾಹೀರಾತು ಬಗ್ಗೆ ಸ್ಪಷ್ಟನೆ

ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ನೀಡಲಾಗುವ ಜಾಹೀರಾತು ತಂಬಾಕಿನದ್ದಲ್ಲ ಎಂದು ಕೆಎಸ್​ಆರ್​ಟಿಸಿ ಸ್ಪಷ್ಟಪಡಿಸಿದೆ. 

ಮಂಗಳೂರಿನಿಂದ ಮುಡಿಪುವರೆಗೆ ತೆರಳುವ ಕೆಎಸ್​ಆರ್​ಟಿಸಿ ಬಸ್​ನ ಹಿಂಭಾಗದಲ್ಲಿ ತಂಬಾಕು ಕಂಪನಿಯ ವಿಮಲ್​ ಜಾಹೀರಾತನ್ನು ನೀಡಲಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೂರು ನೀಡಲಾಗಿತ್ತು. 

ಜನ ದುಶ್ಚಟ ಬೆಳೆಸುವುದನ್ನು ಸರಕಾರ ಬೆಂಬಲಿಸುತ್ತದೆಯೇ..? ದುಡ್ಡು ಸಿಗುತ್ತದೆಂದು ಗುಟ್ಕಾ ಜಾಹೀರಾತನ್ನು ಸರಕಾರಿ ಬಸ್ಸುಗಳಲ್ಲಿ ಹಾಕುವುದು ಎಷ್ಟು ಸರಿ..? ಹಾಗಾದರೆ ಇದೇ ಬಸ್ಸೊಳಗೆ ಕೂತು ಗುಟ್ಕಾ, ತಂಬಾಕು ಸೇವನೆಗ್ಯಾಕೆ ನಿರ್ಬಂಧ..?

ಎಂದು ಇಸ್ಮತ್​ ಪಜೀರ್​ ಎನ್ನುವವರು ಪ್ರಶ್ನಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಎಸ್​ಆರ್​ಟಿಸಿ 

ಸರ್ಕಾರಿ ಬಸ್​ಗಳ ಮೇಲೆ ಗುಟ್ಕಾ ಜಾಹೀರಾತು ನೀಡಿರುವ ಸಂಬಂಧ ದೂರನ್ನು ಪರಿಶೀಲಿಸಲಾಯಿತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಯಾವುದೇ ಗುಟ್ಕಾ ಅಥವಾ ತಂಬಾಕು ಜಾಹೀರಾತುಗಳನ್ನು ಪ್ರದರ್ಶಿಸಲು ಅವಕಾಶ ನೀಡಿರುವುದಿಲ್ಲ. ಸದರಿ ಜಾಹೀರಾತು ಏಲಕ್ಕಿ ಉತ್ಪನ್ನವಾಗಿದ್ದು, ಇದು ತಂಬಾಕು ರಹಿತ ಉತ್ಪನ್ನವಾಗಿರುತ್ತದೆ

ಎಂದು ಕೆಎಸ್​ಆರ್​ಟಿಸಿ ಸ್ಪಷ್ಟಪಡಿಸಿದೆ.

ಕಳೆದ ವರ್ಷ ಶಾರೂಖ್​ ಖಾನ್​, ಅಜಯ್​ ದೇವಗನ್​ ಅವರ ಜೊತೆಗೆ ಅಕ್ಷಯ್​ ಕುಮಾರ್​ ಅವರು ವಿಮಲ್​-ಇಲಾಚಿ (ಏಲಕ್ಕಿ) ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು. ಆದರೆ ಸಾರ್ವಜನಿಕ ಟೀಕೆಗಳ ಬಳಿಕ ಆ ವಿಮಲ್​ ಜಾಹೀರಾತಿನಿಂದ ಹಿಂದೆ ಸರಿದಿದ್ದರು.