BREAKING: ಮುಖ್ಯಮಂತ್ರಿಯಾಗಿ ನಾಳೆ ಮತ್ತೆ ನಿತೀಶ್​ ಕುಮಾರ್​ ಪ್ರಮಾಣವಚನ

ಬಿಹಾರದ ಹೊಸ ಮುಖ್ಯಮಂತ್ರಿಯಾಗಿ ನಾಳೆ ಮತ್ತೆ ನಿತೀಶ್​ ಕುಮಾರ್​ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ನಾಳೆ ಮಧ್ಯಾಹ್ನ 2 ಗಂಟೆಗೆ ರಾಜಧಾನಿ ಪಾಟ್ನಾದಲ್ಲಿ ಕಾರ್ಯಕ್ರಮ ನಡೆಯಲಿದೆ.

ಆರ್​ಜೆಡಿ ನಾಯಕ ತೇಜಸ್ವಿಯಾದವ್​ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಬಿಜೆಪಿ ಮೈತ್ರಿಕೂಟ ಮುರಿದುಕೊಂಡಿರುವ ನಿತೀಶ್​ ಕುಮಾರ್​ ಅವರು ಇವತ್ತು ರಾಜ್ಯಪಾಲರನ್ನು ಭೇಟಿ ಆಗಿ 164 ಶಾಸಕರ ಬೆಂಬಲದ ಪತ್ರವನ್ನು ಸಲ್ಲಿಸಿದರು.

243 ಶಾಸಕರಿರುವ ವಿಧಾನಸಭೆಯಲ್ಲಿ ಜೆಡಿಯು – 45, ಆರ್​ಜೆಡಿ – 90 ಮತ್ತು ಕಾಂಗ್ರೆಸ್​ – 19 ಶಾಸಕರನ್ನು ಹೊಂದಿದೆ. ಬಹುಮತಕ್ಕೆ ಬೇಕಿರುವುದು 127 ಶಾಸಕರ ಬೆಂಬಲ. ಬಿಜೆಪಿ -77, ಎಡಪಕ್ಷಗಳು – 16, ಇತರೆ – ಆರು ಮಂದಿ ಶಾಸಕರಿದ್ದಾರೆ.

2000ರಲ್ಲಿ ಕೇವಲ 7 ದಿನದ ಮಟ್ಟಿಗೆ ಸಿಎಂ ಆಗಿದ್ದ ನಿತೀಶ್​ ಕುಮಾರ್​ ಅವರು ಆ ಬಳಿಕ 2005ರಿಂದ ನಿರಂತರವಾಗಿ ಇಲ್ಲಿಯವರೆಗೂ ಸಿಎಂ ಆಗಿದ್ದಾರೆ.

LEAVE A REPLY

Please enter your comment!
Please enter your name here