ಹೈಕೋರ್ಟ್ ನ್ಯಾಯವಾದಿಗಳಾದ ಜಿನೇಂದ್ರ ಕುಮಾರ್ ಮತ್ತು ವಸುಧಾ ಹಾಗೂ ತಂಡದವರ ಹೊಸ ಕಚೇರಿ ಬೆಂಗಳೂರಲ್ಲಿ ಆರಂಭವಾಗಿದೆ.
ಬೆಂಗಳೂರಿನ ಮಲ್ಲೇಶ್ವರದ ಮಂತ್ರಿಮಾಲ್ ಎದುರಿನ ಶಿರೂರು ಪಾರ್ಕ್ ಪಕ್ಕದಲ್ಲಿ BJK ಅಸೋಸಿಯೇಟ್ಸ್ ಹೆಸರಲ್ಲಿ ಹೊಸ ಕಚೇರಿ ಉದ್ಘಾಟನೆಯಾಗಿದೆ.
ADVERTISEMENT
ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಮಾಜಿ ಮುಖ್ಯ ಆಯುಕ್ತ ಮತ್ತು ಕಾನೂನು ಇಲಾಖೆ ಮಾಜಿ ಪ್ರಧಾನ ಕಾರ್ಯದರ್ಶಿ ಎನ್ ಸಿ ಶ್ರೀನಿವಾಸ್ ಅವರು ಬಿಜಿಕೆ ಅಸೋಸಿಯೇಟ್ಸ್ ಕಚೇರಿಯನ್ನು ಉದ್ಘಾಟಿಸಿದರು.
ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಪೃಥ್ವಿರಾಜ್ ರೈ, ಹಿರಿಯ ಪೊಲೀಸ್ ಅಧಿಕಾರಿ ಆಂತರಿಕ ಭದ್ರತೆ ವಿಭಾಗದ ಎಸ್ಪಿ ಜಿನೇಂದ್ರ ಖನಗಾವಿ, ಮಣಿಪಾಲ್ ಹೆಲ್ತ್ಮ್ಯಾಪ್ ಡಯಾಗ್ನಾಸ್ಟಿಕ್ನ ಮುಖ್ಯ ರೇಡಿಯೋಲಾಜಿಸ್ಟ್ ಸಂದೀಪ್ ಬಲ್ಲಾಳ್, ಖ್ಯಾತ ಜ್ಯೋತಿಷಿ ಮತ್ತು ಹಿರಿಯ ಲೆಕ್ಕ ಪರಿಶೋಧಕ ಎಚ್ ಟಿ ರಾಧಾಕೃಷ್ಣ ಶಾಸ್ತ್ರಿ ಮತ್ತು ಆದಾಯ ತೆರಿಗೆ ಇಲಾಖೆ ಜಂಟಿ ಆಯುಕ್ತರಾದ ಸುಧೀಂದ್ರ ರಾವ್ ಉಪಸ್ಥಿತರಿದ್ದರು.
ADVERTISEMENT