ತೆಲಂಗಾಣ ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ ಕೆಲವೇ ಗಂಟೆಗಳು ಬಾಕಿ ಇರುವ ಹೊತ್ತಲ್ಲೇ ತೆಲಂಗಾಣ ಮತ್ತು ಆಂಧ್ರಪ್ರದೇಶ ನಡುವೆ ನೀರಿನ ಸಂಘರ್ಷ ಹೊಸ ರೂಪ ಪಡೆದಿದೆ.
ತೆಲಂಗಾಣ ರಾಜ್ಯದ ವ್ಯಾಪ್ತಿಗೆ ಬರುವ ನಾಗಾರ್ಜುನ ಸಾಗರ ಅಣೆಕಟ್ಟಿಗೆ ನುಗ್ಗಿದ ಆಂಧ್ರಪ್ರದೇಶದ ಪೊಲೀಸರು ಬಲವಂತವಾಗಿ ಆಂಧ್ರಕ್ಕೆ ನೀರು ಬಿಡುಗಡೆ ಮಾಡಿದ್ದಾರೆ.
ADVERTISEMENT
ADVERTISEMENT
ಮಧ್ಯರಾತ್ರಿ 2 ಗಂಟೆಗೆ ಆಂಧ್ರಪ್ರದೇಶದ 700 ಪೊಲೀಸರು ನಾಗಾರ್ಜುನ ಡ್ಯಾಂನ ಗೇಟ್ಗಳಿಂದ ಆಂಧ್ರಕ್ಕೆ ಕಾಲುವೆಗಳ ಮೂಲಕ 5,000 ಕ್ಯೂಸೆಕ್ನ್ನಷ್ಟು ಕೃಷ್ಣ ನೀರನ್ನು ಆಂಧ್ರಕ್ಕೆ ಬಿಡುಗಡೆ ಮಾಡಿದ್ದಾರೆ.
ಈ ಬಗ್ಗೆ ಆಂಧ್ರ ಜಲಸಂಪನ್ಮೂಲ ಸಚಿವ ಅಂಬಾಟಿ ರಾಮ್ಬಾಬ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ತೆಲಂಗಾಣದಲ್ಲಿ ಈಗ ಚುನಾಯಿತ ಸರ್ಕಾರ ಇಲ್ಲ. ನಾಳೆಯ ಫಲಿತಾಂಶದ ಬಳಿಕ ಹೊಸ ಸರ್ಕಾರ ಬರಬೇಕಿದೆ. ತೆಲಂಗಾಣ ಆಡಳಿತ ಚುನಾವಣಾ ಫಲಿತಾಂಶದ ಸಿದ್ಧತೆಯಲ್ಲಿರುವಾಗಲೇ ಆಂಧ್ರ ಮಧ್ಯರಾತ್ರಿ ಈ ಆಘಾತ ನೀಡಿದೆ.
ನಾವು ಯಾವುದೇ ಒಪ್ಪಂದ ಉಲ್ಲಂಘಿಸಿಲ್ಲ. ಕೃಷ್ಣ ನದಿಯ ಶೇಕಡಾ 66ರಷ್ಟು ನೀರು ಆಂಧ್ರಕ್ಕೆ ಸೇರಿದ್ದು, ಶೇಕಡಾ ೩೪ರಷ್ಟು ತೆಲಂಗಾಣಕ್ಕೆ ಸೇರಿದ್ದು. ನಮಗೆ ಸೇರಿದ ಒಂದೇ ಒಂದು ಹನಿ ನೀರನ್ನು ನಾವು ಇದುವರೆಗೂ ಬಳಸಿಲ್ಲ. ಈ ನೀರು ನಮಗೆ ಸೇರಬೇಕಿದ್ದು
ಎಂದು ಆಂಧ್ರ ಜಲಸಂಪನ್ಮೂಲ ಸಚಿವ ಅಂಬಾಡಿ ರಾಮ್ಬಾಬು ಹೇಳಿದ್ದಾರೆ.