ಮುಸ್ಲಿಮರು ನಡೆಸುವ ಮದರಸಗಳಲ್ಲಿ ಇನ್ನು ಮುಂದೆ ರಾಷ್ಟ್ರಗೀತೆ ಜನಗಣಮನ ಹಾಡುವುದನ್ನು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಕಡ್ಡಾಯಗೊಳಿಸಿದೆ.
ಉತ್ತರಪ್ರದೇಶದ ಮದರಸ ಶಿಕ್ಷಣ ಮಂಡಳಿ ರಿಜಿಸ್ಟ್ರಾರ್ ಈ ಸಂಬಂಧ ಎಲ್ಲ ಜಿಲ್ಲೆಗಳ ಅಲ್ಪಸಂಖ್ಯಾತ ಕಲ್ಯಾಣಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.
ಮದರಸಗಳಲ್ಲಿ ಪ್ರಾರ್ಥನೆ ವೇಳೆ ರಾಷ್ಟ್ರಗೀತೆ ಹಾಡುವುದು ಕಡ್ಡಾಯವಾಗಿದೆ. ರಂಜಾನ್ ರಜೆಯ ಬಳಿಕ ಇವತ್ತಿನಿಂದ ಮದರಸಗಳು ಆರಂಭ ಆಗಿದ್ದು, ರಾಷ್ಟ್ರಗೀತೆ ಹಾಡುವುದು ಇವತ್ತಿನಿಂದಲೇ ಕಡ್ಡಾಯವಾಗಿದೆ.
ಮದರಸಗಳಲ್ಲಿನ ಮಕ್ಕಳಲ್ಲಿ ರಾಷ್ಟçಪ್ರೇಮ ಬೆಳೆಸುವ ಸಲುವಾಗಿ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಉತ್ತರಪ್ರದೇಶದ ಅಲ್ಪಸಂಖ್ಯಾತ ಖಾತೆಗಳ ಸಚಿವ ಧರ್ಮಪಾಲ್ ಸಿಂಗ್ ಹೇಳಿದ್ದರು.