ವಾಡಿಕೆಗಿಂತ ಅರ್ಧ ತಿಂಗಳು ಮೊದಲೇ ಅಂದರೆ ಮುಂಗಾರು ಮಾರುತ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
ಮೇ 15ರ ವೇಳೆಗೆ ಅಂಡಮಾನ್ ನಿಕೋಬಾರ್ ತೀರಕ್ಕೆ ಮುಂಗಾರು ಮಾರುತ ಪ್ರವೇಶಿಸಲಿದೆ. ಅಂದರೆ ಇನ್ನು ಮೂರು ದಿನಗಳಲ್ಲಿ ಮುಂಗಾರು ಮಳೆ ಆರಂಭ ಆಗಲಿದೆ.
ಜೂನ್ 1ರಂದು ಮುಂಗಾರು ಮಳೆ ಆರಂಭ ಆಗುವುದು ವಾಡಿಕೆ. ಆದರೆ ಈ ಬಾರಿ ವಾಡಿಕೆಗಿಂತ 15 ದಿನ ಮೊದಲೇ ಮುಂಗಾರು ಮಳೆ ಆರಂಭ ಆಗಲಿರುವ ಹಿನ್ನೆಲೆಯಲ್ಲಿ ಬಿಸಿಲ ಬೇಗೆಯಿಂದ ಜನಸಾಮಾನ್ಯರಿಗೆ ಬೇಗನೇ ಸಮಾಧಾನ ಸಿಗಲಿದೆ.
ಅಸಾನಿ ಚಂಡಮಾರುತ ಕಾರಣದಿಂದ ಕರ್ನಾಟಕ, ಆಂಧ್ರ, ತೆಲಂಗಾಣ, ಒಡಿಶಾದಲ್ಲಿ ಈಗಾಗಲೇ ಮಳೆ ಆಗಿದೆ. ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ತುಂತುರು ಮಳೆ ಆಗುತ್ತಿದೆ.