ಜಗತ್ತಿನ ಅತೀ ಶ್ರೀಮಂತ ಮುಖೇಶ್ ಅಂಬಾನಿ ಅವರ ಮಹತ್ವಾಕಾಂಕ್ಷೆಯ ದೇಶದ ಪ್ರಮುಖ ಟೆಲಿಕಾಂ ಕಂಪನಿಗೆ ರಿಲಯನ್ಸ್ ಜಿಯೋ ಕಂಪನಿಗೆ ಈಗ ಅವರ ಮಗನೇ ಮುಖ್ಯಸ್ಥ.
ರಿಲಯನ್ಸ್ ಜಿಯೋ ಕಂಪನಿಯ ನಿರ್ದೇಶಕ ಸ್ಥಾನಕ್ಕೆ ಮುಖೇಶ್ ಅಂಬಾನಿ ರಾಜೀನಾಮೆ ನೀಡಿದ್ದು, ಮುಖೇಶ್ ಮಗ ಆಕಾಶ್ ಅಂಬಾನಿ ಜಿಯೋದ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.
65 ವರ್ಷದ ಮುಖೇಶ್ ಅಂಬಾನಿ 30 ವರ್ಷದ ತಮ್ಮ ಹಿರಿಯ ಪುತ್ರನಿಗೆ ಜಿಯೋದ ಜವಾಬ್ದಾರಿ ವಹಿಸಿದ್ದಾರೆ.
ರಿಲಯನ್ಸ್ ಜಿಯೋ ವಾರ್ಷಿಕ ಆದಾಯ 90,827 ಕೋಟಿ ರೂಪಾಯಿ. 305,965 ಕೋಟಿ ರೂಪಾಯಿ ಮೊತ್ತದ ಆಸ್ತಿ ಜಿಯೋ ಹೆಸರಲ್ಲಿದೆ.