ಕಾಂಗ್ರೆಸ್​ನಲ್ಲಿದ್ದಾಗ ಮೂರು ಸಲವೂ ಗೆದ್ದಿದ್ದೆ, ಬಿಜೆಪಿಯಲ್ಲಿ 2 ಸಲವೂ ಸೋತೆ – ಮಾಜಿ ಸಚಿವ MTB ಆಕ್ರೋಶ

ಬಿಜೆಪಿ ವಿರುದ್ಧ ಜನ ಸಿಟ್ಟಾಗಿದ್ದರು. ಇದು ನನ್ನ ಸೋಲಿಗೂ ಕಾರಣವಾಯಿತು ಎಂದು ಹೊಸಕೋಟೆ ಮಾಜಿ ಶಾಸಕ ಎಂ ಟಿ ಬಿ ನಾಗರಾಜ್​ ಆಕ್ರೋಶ ಹೊರಹಾಕಿದ್ದಾರೆ.
ಇವತ್ತು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸೋತ ಅಭ್ಯರ್ಥಿಗಳ ಜೊತೆಗಿನ ಸಭೆಯಲ್ಲಿ ಎಂಟಿಬಿ ನಾಗರಾಜ್​ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ನಾನು ಕಾಂಗ್ರೆಸ್​ನಲ್ಲಿದ್ದಾಗ ಮೂರು ಸಲ ಗೆದ್ದಿದ್ದೆ. ಬಿಜೆಪಿಗೆ ಬಂದ ಮೇಲೆ ಎರಡೂ ಸಲವೂ ಸೋಲಬೇಕಾಯಿತು. ಕಾಂಗ್ರೆಸ್​ನವರು ಹತ್ತು ಕೆಜಿ ಅಕ್ಕಿ ಕೊಡ್ತಿದ್ರು. ಆದ್ರೆ ನೀವು ಆರು ಕೆಜಿ ಅಕ್ಕಿ ಕೊಟ್ಟಿದ್ದರಿಂದ ಬಡವರು ಸಿಟ್ಟಾಗಿದ್ರು
ಎಂದು ಎಂಟಿಬಿ ಸಿಡಿಮಿಡಿಗೊಂಡಿದ್ದಾರೆ.
ಸೋಲಿಗೆ ಸುಧಾಕರ್​ ಕಾರಣ:
ಹೊಸಕೋಟೆಯಲ್ಲಿ ನಾನು ಮತ್ತು ಚಿಂತಾಮಣಿಯಲ್ಲಿ ಬಿಜೆಪಿ ಸೋಲಿಗೆ ಮಾಜಿ ಸಚಿವ ಡಾ ಕೆ ಸುಧಾಕರ್​ ಕಾರಣ. ಸುಧಾಕರ್ ತಾವೂ ಸೋತು, ನಮ್ಮನ್ನೂ‌‌ ಸೋಲಿಸಿದರು
ಎಂದು ಎಂಟಿಬಿ ಸಿಟ್ಟಾದರು.