ADVERTISEMENT
ಬಾಲಕಿಯರು 14 ವರ್ಷಕ್ಕೆ ಮದುವೆ ಆಗುತ್ತಿದ್ದರು ಮತ್ತು 17 ವರ್ಷಕ್ಕೆ ಮಗುವಿಗೆ ಜನ್ಮ ನೀಡುತ್ತಿದ್ದರು ಎಂದು ಮನುಸ್ಪೃತಿಯನ್ನು ಉಲ್ಲೇಖಿಸಿ ಗುಜರಾತ್ ಹೈಕೋರ್ಟ್ನ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
ಅತ್ಯಾಚಾರಕ್ಕೊಳಗಾದ ಬಾಲಕಿಯ ತಂದೆ 7 ತಿಂಗಳ ಗರ್ಭವತಿಯಾಗಿರುವ ತಮ್ಮ ಮಗಳ ಗರ್ಭಪಾತಕ್ಕೆ ಅನುಮತಿ ನೀಡುವಂತೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ನಾವು ಈಗ 21ನೇ ಶತಮಾನದಲ್ಲಿ ಬದುಕುತ್ತಿದ್ದೇವೆ. ನೀವು ನಿಮ್ಮ ತಾಯಿ ಅಥವಾ ಮುತ್ತಜ್ಜಿಯನ್ನು ಹೋಗಿ ಕೇಳಿ. ಹುಡುಗಿಯರು ಮದುವೆ ಆಗುವುದಕ್ಕೆ 14ರಿಂದ 16 ವರ್ಷ ಸಾಮಾನ್ಯ ವಯಸ್ಸು ಎಂದು ಹೇಳುತ್ತಾರೆ. ಹುಡುಗಿಯರಿಗೆ 17 ವರ್ಷ ಆಗುತ್ತಿದ್ದಂತೆ ಅವರು ಕನಿಷ್ಠ ಒಂದು ಮಗುವನ್ನಾದರೂ ಹೆರುತ್ತಿದ್ದರು
ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
ನಾನು ಹೇಳುತ್ತಿರುವುದರ ಅರ್ಥ, ಬಾಲಕರಿಗಿಂತ ಬಾಲಕಿಯರು ಬೇಗ ವಯಸ್ಕ ವ್ಯವಸ್ಥೆಗೆ ಬರುತ್ತಾರೆ. ಇದು ಮನುಸ್ಪೃತಿಯಲ್ಲಿದೆ. ನೀವು ಅದನ್ನು ಓದಲ್ಲ ಎಂದು ಗೊತ್ತು, ಆದರೂ ಒಂದು ಸಲ ಓದಿ
ಎಂದು ಅರ್ಜಿದಾರ ಪರ ವಕೀಲ ಸಿಕಂದರ್ ಸೈಯದ್ ಅವರಿಗೆ ನ್ಯಾಯಮೂರ್ತಿ ಸಮಿರ್ ದವೆ ಸಲಹೆ ನೀಡಿದ್ದಾರೆ.
ವಕೀಲ ಸೈಯದ್ ಅವರು
ಹೌದು, ಇಸ್ಲಾಂನಲ್ಲೂ ಬಾಲಕಿಯರು 13 ವರ್ಷಕ್ಕೆ ಮದುವೆ ಆಗುತ್ತಾರೆ
ಎಂದು ಪ್ರತಿಕ್ರಿಯಿಸಿದ್ದಾರೆ.
ನೀವೊಂದು ಅರ್ಥ ಮಾಡಿಕೊಳ್ಳಬೇಕು, ಯಾರೂ ಕೂಡಾ, ನ್ಯಾಯಾಲಯ ಕೂಡಾ ಕೆಲವು ಲಕ್ಷಣಗಳು ಅಥವಾ ಅಡ್ಡ ಪರಿಣಾಮಗಳು ಇಲ್ಲದೇ ಹೋದರೆ ಯಾರನ್ನೂ ಕೊಲ್ಲಲು ಅನುಮತಿಸಲು ಸಾಧ್ಯವಿಲ್ಲ
ಎಮದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಸಮಿತಿಯೊಂದನ್ನು ರಚಿಸಿ ಮಗು ಮತ್ತು ಗರ್ಭದ ಬಗ್ಗೆ ತಪಾಸಣೆ ನಡೆಸಿ ವರದಿ ನೀಡುವಂತೆ ರಾಜಕೋಟ್ ಸಿವಿಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಜೂನ್ 15ಕ್ಕೆ ಮುಂದೂಡಲಾಗಿದೆ.
ADVERTISEMENT