ಕ್ಷಮೆ ಕೇಳಿದ ಪ್ರತಾಪ್​ ಸಿಂಹ ಹೊಸ ಲೆಕ್ಕ..!

ಕೊಟ್ಟ ಮಾತಿಗೆ ತಪ್ಪಿದ ಮೈಸೂರು-ಕೊಡಗು (Mysuru – Kodagu) ಸಂಸದ (MP) ಪ್ರತಾಪ್​ ಸಿಂಹ (Pratap Simha) ಕ್ಷಮೆ ಕೋರಿದ್ದಾರೆ.

ಜುಲೈನಲ್ಲಿ ಬೆಂಗಳೂರು-ನಿಡಘಟ್ಟ ರಸ್ತೆಯನ್ನು ಸಂಚಾರಕ್ಕೆ ತೆರವು ಮಾಡಿಸುತ್ತೇನೆ ಎಂದಿದ್ದೆ, ನಂತರ ಆಗಸ್ಟ್ 15 ರಂದು ಬಿಡದಿ, ರಾಮನಗರ-ಚನ್ನಪಟ್ಟಣ ಬೈಪಾಸ್ ಓಪನ್ ಮಾಡುತ್ತೇವೆ ಎಂದೆ. ಮಾತಿಗೆ ತಪ್ಪಿದ್ದೇನೆ, ದಯವಿಟ್ಟು ಕ್ಷಮಿಸಿ. ಎಲ್ಲ ಪ್ರಯತ್ನಗಳ ನಡುವೆಯೂ ಇನ್ನೂ ವಾರ, ಹತ್ತು ದಿನಗಳ ಕೆಲಸ ಬಾಕಿಯಿದೆ. ಗುಡ್ಡ ಕಡಿದು ರಸ್ತೆ ನಿರ್ಮಾಣ ನಡೆಯುತ್ತಿದೆ, ಸ್ವಲ್ಪ ಕಾಲಾವಕಾಶ ನೀಡಿ, ಪ್ಲೀಸ್…

ಎಂದು ಪ್ರತಾಪ್​ ಸಿಂಹ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇವತ್ತು ಚನ್ನಪಟ್ಟಣ – ರಾಮನಗರ (Channapattana – Ramanagara Bypass) ಬೈಪಾಸ್ ನ ಗುಡ್ಡ ಕಡಿದು ರಸ್ತೆ ನಿರ್ಮಾಣ ಮಾಡುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ್ದ ಪ್ರತಾಪ್​ ಸಿಂಹ ಅವರು ಅಲ್ಲಿಂದಲೇ ಲೈವ್​ ವೀಡಿಯೋ ಮಾಡಿದ್ದಾರೆ.

10 ದಿನದ ಗಡುವು:

ಆ ವೀಡಿಯೋದಲ್ಲಿ ಸಂಸದ ಪ್ರತಾಪ್​ ಸಿಂಹ ಅವರು 10 ದಿನದೊಳಗೆ ಚಾಮುಂಡೇಶ್ವರಿ ಆರ್ಶೀವಾದದಿಂದ ಕಾಮಗಾರಿಯನ್ನು ಮುಗಿಸಿ ಬೈಪಾಸ್​ನ್ನು ಸಂಚಾರಕ್ಕೆ ಮುಕ್ತ ಮಾಡುವುದಾಗಿ ಮತ್ತೆ ವಾಗ್ದಾನ ಮಾಡಿದ್ದಾರೆ.

LEAVE A REPLY

Please enter your comment!
Please enter your name here