ADVERTISEMENT
ಮಂಗಳೂರಲ್ಲಿ ವರದಿಗಾರ ಮತ್ತು ಅವರ ಸ್ನೇಹಿತೆಗೆ ನೈತಿಕ ಪೊಲೀಸ್ಗಿರಿ ಹೆಸರಲ್ಲಿ ಕಿರುಕುಳ ನೀಡಿದ ಇಬ್ಬರು ದುಷ್ಕರ್ಮಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪತ್ರಕರ್ತ ಅಭಿಜಿತ್ ಜೆ ಕೊಲ್ಪೆ ಅವರು ತಮ್ಮ ಸ್ನೇಹಿತೆಯೊಂದಿಗೆ ರೆಸ್ಟೋರೆಂಟ್ ಹೋಗಿ ಬರುತ್ತಿದ್ದಾಗ ಇಬ್ಬರು ಕಿಡಿಗೇಡಿಗಳು ಅವರನ್ನು ಅಡ್ಡಗಟ್ಟಿ ನೈತಿಕ ಪೊಲೀಸ್ಗಿರಿ ಹೆಸರಲ್ಲಿ ಕಿರುಕುಳ ನೀಡಿದ್ದಾರೆ.
ಪತ್ರಕರ್ತ ಅಭಿಜಿತ್ ಕೊಲ್ಪೆ ಅವರನ್ನು ಮುಸ್ಲಿಂ ಧರ್ಮಕ್ಕೆ ಸೇರಿದವರು ಎಂದು ಭಾವಿಸಿ ಈ ಇಬ್ಬರೂ ಕಿಡಿಗೇಡಿಗಳು ಅಭಿಜಿತ್ ಅವರ ಜೊತೆಗೆ ಹಿಂದೂ ಹುಡುಗಿ ಹೋಗಿದ್ದನ್ನು ಆಕ್ಷೇಪಿಸಿದ್ದರು.
ಅಭಿಜಿತ್ ಕೊಲ್ಪೆ ಮತ್ತು ಅವರ ಸ್ನೇಹಿತೆ ಇಬ್ಬರೂ ಹಿಂದೂ ಧರ್ಮಕ್ಕೆ ಸೇರಿದವರು.
ಜುಲೈ 30ರಂದು ಮಂಗಳೂರು ನಗರದ ಕಾವೂರು ಪೊಲೀಸ್ ಠಾಣೆಯಲ್ಲಿ ಅಭಿಜಿತ್ ಕೊಲ್ಪೆ ಅವರು ದೂರು ನೀಡಿದ್ದಾರೆ.
ದೂರು ಆಧರಿಸಿ ಇಬ್ಬರು ಕಿಡಿಗೇಡಿಗಳಾದ ಚೇತನ್ ಕುಮಾರ್ ಮತ್ತು ನವೀನ್ ಎಂಬ ಇಬ್ಬರು ದುಷ್ಕರ್ಮಿಗಳ ವಿರುದ್ಧ ಐಪಿಸಿ ಕಲಂ 506, 504ರಡಿ ಎಫ್ಐಆರ್ ದಾಖಲಾಗಿದೆ. ಬಳಿಕ ಇಬ್ಬರೂ ಕಿಡಿಗೇಡಿಗಳನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು.
ADVERTISEMENT