Expressway: ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​​ ವೇ ಪ್ರವೇಶಿಸುವ ದ್ವಿಚಕ್ರವಾಹನ, ಆಟೋಗಳಿಗೆ ದಂಡ

ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ವೇನಲ್ಲಿ ಬೈಕ್​ ಒಳಗೊಂಡಂತೆ ದ್ವಿಚಕ್ರ ವಾಹನ ಮತ್ತು ಆಟೋ ಮತ್ತು ಟ್ರ್ಯಾಕ್ಟರ್​ಗಳ ಓಡಾಟಕ್ಕೆ ನಿಷೇಧ ಹೇರಲಾಗಿದ್ದು, ಒಂದು ವೇಳೆ ಏಕ್ಸ್​ಪ್ರೆಸ್​ ವೇ ಪ್ರವೇಶಿಸಿದರೆ ದಂಡ ಕಟ್ಟುವುದು ಅನಿವಾರ್ಯವಾಗಲಿದೆ.

ನಿರ್ಬಂಧ ಉಲ್ಲಂಘಿಸಿ ಎಕ್ಸ್​ಪ್ರೆಸ್​ವೇ ಪ್ರವೇಶಿಸುವ ದ್ವಿಚಕ್ರ ವಾಹನ ಮತ್ತು ಆಟೋಗಳಿಗೆ 500 ರೂಪಾಯಿ ದಂಡ ವಿಧಿಸಲಾಗುತ್ತದೆ..

ಮೊದಲ ದಿನ ನಿರ್ಬಂಧ ಉಲ್ಲಂಘಿಸಿ ಎಕ್ಸ್​ಪ್ರೆಸ್​ವೇಗೆ ಪ್ರವೇಶಿಸಿದ 137 ದ್ವಿಚಕ್ರ ಮತ್ತು ಆಟೋಗಳ ವಿರುದ್ಧ ದಂಡ ವಿಧಿಸಿ 68,500 ರೂಪಾಯಿ ವಸೂಲಿ ಮಾಡಲಾಗಿದೆ.

ಎಕ್ಸ್​ಪ್ರೆಸ್​ ವೇ ಪ್ರವೇಶಿಸುವ ದ್ವಿಚಕ್ರ ಮತ್ತು ಆಟೋಗಳ ಮೇಲೆ ದಂಡ ವಿಧಿಸುವ ಸಲುವಾಗಿ ಎಕ್ಸ್​ಪ್ರೆಸ್​ವೇಯಲ್ಲಿ ಅಲ್ಲಲ್ಲಿ ಪೊಲೀಸರು ನಿಯೋಜನೆಯಾಗಿದ್ದಾರೆ.

LEAVE A REPLY

Please enter your comment!
Please enter your name here