ಕ್ರಿಕೆಟ್ ಆಟಗಾರ್ತಿ ಹಾಗೂ ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಅವರು ಇಂದು ಎಲ್ಲಾ ವಿಧದ ಅಂತರಾಷ್ಟ್ರೀಯ ಕ್ರಿಕೇಟ್ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
39 ವರ್ಷದ ಮಿಥಾಲಿ ರಾಜ್ ಪ್ರಸ್ತುತ ಭಾರತ ಮಹಿಳಾ ತಂಡದ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕಿಯಾಗಿದ್ದರು.
ತಮ್ಮ ನಿವೃತ್ತಿ ಬಗ್ಗೆ ಟ್ವೀಟ್ ಮಾಡಿರುವ ಅವರು, ಇದು ನನ್ನ ನಿವೃತ್ತಿ ಘೋಷಣೆಗೆ ಸರಿಯಾದ ಸಮಯ ಎನ್ನಿಸುತ್ತದೆ. ಭಾರತದ ಮಹಿಳಾ ತಂಡದಲ್ಲಿ ಅತ್ಯುತ್ತಮ ಆಟಗಾರ್ತಿಯರಿದ್ದಾರೆ. ಭವಿಷ್ಯದಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಮಿಂಚಲಿದೆ ಎಂದು ಹೇಳಿದ್ದಾರೆ.
16 ವರ್ಷದ ಯುವತಿಯಾಗಿದ್ದಾಗ 1999 ರಲ್ಲಿ ಮಿಥಾಲಿ ರಾಜ್ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. 1999 ರ ಜೂನ್ 26 ರಂದು ಐರ್ಲೆಂಡ್ ವಿರುದ್ಧ 114 ರನ್ ಭಾರಿಸಿದ ಮೊದಲ ಯುವ ಮಹಿಳಾ ಆಟಗಾರ್ತಿಯಾಗಿ ಇವರು ಗುರುತಿಸಿಕೊಂಡಿದ್ದರು. ಅಂತರಾಷ್ಟ್ರೀಯ ಮಹಿಳಾ ಕ್ರಿಕೇಟ್ನ ಮೂರು ವಿಭಾಗಗಳಲ್ಲಿ ಇದುವರೆಗೂ ಈ ಸಾಧನೆ ಮುರಿಯಲು ಸಾಧ್ಯವಾಗಿಲ್ಲ.
Thank you for all your love & support over the years!
I look forward to my 2nd innings with your blessing and support. pic.twitter.com/OkPUICcU4u— Mithali Raj (@M_Raj03) June 8, 2022
ಮಿಥಾಲಿ ರಾಜ್ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಇದುವರೆಗೂ 12 ಟೆಸ್ಟ್, 232 ಏಕದಿನ ಹಾಗೂ 89 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಇವರು ಈ ವರ್ಷದ ಏಕದಿನ ವಿಶ್ವಕಪ್ನಲ್ಲಿ ಸೌತ್ ಆಫ್ರಿಕಾ ವಿರುದ್ಧ ಕೊನೆ ಪಂದ್ಯ ಆಡಿದ್ದರು. ಈ ಪಂದ್ಯದಲ್ಲಿ ಭಾರತ 3 ರನ್ಗಳಿಂದ ಸೋಲು ಅನುಭವಿಸಿತ್ತು.
ಮಿಥಾಲಿ ರಾಜ್ ಇದುವರೆಗೂ ಎಲ್ಲಾ ವಿಧಗಳಲ್ಲಿ 10,808 ರನ್ ಬಾರಿಸಿದ್ದಾರೆ. ಇವರು ಮಹಿಳಾ ಕ್ರಿಕೇಟ್ನಲ್ಲಿ 7 ಶತಕ ಬಾರಿಸಿದ ಮೊದಲಿಗರಾಗಿದ್ದಾರೆ. ಅಲ್ಲದೇ, ಪ್ರಸ್ತುತ ವಿಶ್ವದ ಅತಿ ಹೆಚ್ಚು ರನ್ ಬಾರಿಸಿದವರ ಸಾಧನೆ ಮಿಥಾಲಿ ರಾಜ್ ಅವರ ಹೆಸರಲ್ಲಿದೆ.