Arrest: ದೆಹಲಿ ಮಾಜಿ ಡಿಸಿಎಂ ಮನೀಶ್​ ಸಿಸೋಡಿಯಾಗೆ ಸುಪ್ರೀಂಕೋರ್ಟ್​ನಿಂದ ಸಿಗದ ಜಾಮೀನು

ಅಬಕಾರಿ ಹಗರಣದಲ್ಲಿ ಬಂಧಿತರಾಗಿರುವ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್​ ಸೆಪ್ಟೆಂಬರ್​ 4ಕ್ಕೆ ಮುಂದೂಡಿದೆ.

ಫೆಬ್ರವರಿ 26ರಂದು ಮನೀಶ್​ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿತ್ತು. 6 ತಿಂಗಳಿಂದ ಸಿಸೋಡಿಯಾ ಜೈಲಿನಲ್ಲಿದ್ದಾರೆ. ಸಿಬಿಐ ಬಂಧನ ಬಳಿಕ ED ಸಿಸೋಡಿಯಾ ಅವರನ್ನು ಬಂಧಿಸಿತ್ತು.

ತಮಗೆ ಜಾಮೀನು ನಿರಾಕರಿಸಿದ್ದ ದೆಹಲಿ ಹೈಕೋರ್ಟ್​ ಆದೇಶ ಪ್ರಶ್ನಿಸಿ ಸಿಸೋಡಿಯಾ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಜುಲೈ 14ರಂದು ನ್ಯಾಯಮೂರ್ತಿ ಸಂಜಯ್​ ಖನ್ನಾ ಮತ್ತು ಎಸ್​ವಿಎನ್​ ಭಟ್ಟಿ ಅವರಿದ್ದ ಸುಪ್ರೀಂಕೋರ್ಟ್​ ಪೀಠ ಪ್ರತಿವಾದಿಗಳಿಗೆ ನೋಟಿಸ್​ ನೀಡಿತ್ತು.

LEAVE A REPLY

Please enter your comment!
Please enter your name here