ಶಿವಸೇನಾ ಬಂಡಾಯ ಶಾಸಕ ಏಕನಾಥ ಶಿಂಧೆಯವರನ್ನು ಬೆಂಬಲಿಸಿದ ಮಹಾರಾಷ್ಟ್ರದ ಮೂವರು ನಾಯಕರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.
ಠಾಣೆಯ ಮಾಜಿ ಮೇಯರ್ ಹಾಗೂ ಶಿವಸೇನಾ ಜಿಲ್ಲಾ ಸಂಚಾಲಕಿ ಮೀನಾಕ್ಷಿ ಶಿಂಧೆ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ಅವರ ನಿರ್ದೇಶನದ ಮೇರೆಗೆ ಮೀನಾಕ್ಷಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.
ಇದಕ್ಕೂ ಮುನ್ನ ಠಾಣೆಯ ಮಾಜಿ ಮೇಯರ್ ನರೇಶ್ ಮಾಸ್ಕೆನ್ ಹಾಗೂ ಸಂಚಾಲಕ ರಾಹುಲ್ ಲೋಂಡೆ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಇವರೆಲ್ಲ ಶಿಂಧೆ ಅವರಿಗೆ ಬೆಂಬಲ ಸೂಚಿಸಿದ್ದರು.
ಈ ಮಧ್ಯೆ, ಎಲ್ಲರೂ ಗುವಾಹಟಿಯಿಂದ ಮುಂಬೈಗೆ ಮರಳಿ ಬನ್ನಿ. ಜತೆಯಾಗಿ ಕುಳಿತುಕೊಂಡು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸೋಣ ಎಂದು ಬಂಡಾಯ ಶಾಸಕರಿಗೆ ಉದ್ಧವ್ ಠಾಕ್ರೆ ಕರೆ ನೀಡಿದ್ದಾರೆ.