BREAKING: ಸರ್ಕಾರಿ ಸ್ವಾಮ್ಯದ ಮೂರು ತೈಲ ಕಂಪನಿಗಳಿಗೆ ಭಾರೀ ನಷ್ಟ

ತೈಲ ಬೆಲೆ ಬದಲಾವಣೆ ಮಾಡದ ಕಾರಣ ಸರ್ಕಾರಿ ಸ್ವಾಮ್ಯದ ಮೂರು ಕಂಪನಿಗಳು 18 ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸಿವೆ.
ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಬಳಿಕ ಅಂದರೆ ಮಾರ್ಚ್​​ 25ರ ಬಳಿಕ ತೈಲ ಕಂಪನಿಗಳು ದರ ಪರಿಷ್ಕರಣೆ ಮಾಡಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಹಾಗೂ ಡಾಲರ್​-ರೂಪಾಯಿ ಮೌಲ್ಯ ಆಧರಿಸಿ ಪ್ರತಿ ದಿನ ದರ ಪರಿಷ್ಕರಣೆ ಮಾಡಲಾಗ್ತಿತ್ತು. ಆದರೆ ಕೇಂದ್ರ ಸರ್ಕಾರ ಪೆಟ್ರೋಲ್​, ಡೀಸೆಲ್​ ಮೇಲೆ ತೆರಿಗೆ ಇಳಿಸಿದ ಬಳಿಕ ದರ ಪರಿಷ್ಕರಣೆ ಆಗುತ್ತಿಲ್ಲ.
ಮೊದಲ ತ್ರೈಮಾಸಿಕ ವರ್ಷ ಅಂದರೆ ಏಪ್ರಿಲ್​ 1ರಿಂದ ಜುಲೈ 31ರವರೆಗೆ ಐಒಸಿಎಲ್​ 1,995 ಕೋಟಿ ರೂ., ಬಿಪಿಸಿಎಲ್​ 6,290 ಕೋಟಿ ರೂ., ಮತ್ತು ಹೆಚ್​ಪಿಸಿಎಲ್​ 10,196 ಕೋಟಿ ರೂಪಾಯಿ ನಷ್ಟ ಅನುಭವಿಸಿವೆ ಎಂದು ಷೇರು ಮಾರುಕಟ್ಟೆಗೆ ಸಲ್ಲಿಸಿರುವ ಮಾಹಿತಿಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here