ಹಿಮಾಚಲಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಟಿ ಕಂಗನಾ ರಣಾವತ್ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಧಿ ವಿಕ್ರಮಾದಿತ್ಯ ಸಿಂಗ್ ವಿರುದ್ಧ ಬಿಜೆಪಿಯ ಕಂಗನಾ ರಣಾವತ್ 516382 ಮತಗಳನ್ನು ಗಳಿಸಿದ್ದಾರೆ.
ಪ್ರಧಾನಿ ಮೋದಿಯವರ ವೈಚಾರಿಕತೆ ಮತ್ತು ಸನಾತನ ಧರ್ಮದ ಮೌಲ್ಯಗಳನ್ನು ರಕ್ಷಿಸುವ ಬದ್ಧತೆ ಬಗ್ಗೆ ಹೆಚ್ಚು ಪ್ರಚಾರ ಮಾಡಿದ್ದ ಕಂಗನಾ ರಣಾವತ್, ತಾವು ಪ್ರಧಾನಿ ನರೇಂದ್ರ ಮೋದಿಯವರ ಹೆಸರಲ್ಲೇ ಗೆಲುವು ಕಂಡಿದ್ದೇನೆ ಎಂದಿದ್ದಾರೆ. ಕ್ಷೇತ್ರದ ಜನತೆಯ ಸೇವೆ ಮುಂದುವರಿಸೋ ಸಲುವಾಗಿ ಮುಂಬೈಗೆ ತೆರಳೋದಿಲ್ಲ ಅಂತ ಹೇಳಿರುವ ಕಂಗನಾ, ಬಾಲಿವುಡ್ ತೊರೆಯುವ ಸುಳಿವು ನೀಡಿದ್ದಾರೆ.
ಇನ್ನು ಕೆಲದಿನಗಳ ಹಿಂದೆ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್, ಈ ಬಾರಿ ಕಂಗನಾ ತನ್ನ ಬ್ಯಾಗ್ಗಳನ್ನು ಪ್ಯಾಕ್ ಮಾಡಿ ಹೊರಡಬೇಕಾಗಬಹುದು ಅಂತ ಗೇಲಿ ಮಾಡಿದ್ದರು. ಇದೀಗ ತಿರುಗೇಟು ನೀಡಿರುವ ಕಂಗನಾ ಹೆಣ್ಣಿನ ಬಗ್ಗೆ ಕೀಳಾಗಿ ಮಾತನಾಡಿದರ ಪರಿಣಾಮವನ್ನು ಅವರು ಅನುಭವಿಸಬೇಕಾಗುತ್ತದೆ. ಅದು ಇಂದು ನಾವು ಮುನ್ನಡೆ ಸಾಧಿಸಿದ ರೀತಿಯಿಂದ ಸ್ಪಷ್ಟವಾಗುತ್ತಿದೆ. ಮಂಡಿ ಹೆಣ್ಣುಮಕ್ಕಳು ಅವಮಾನಗಳನ್ನು ಸಹಿಸುವುದಿಲ್ಲ ಅಂತ ಕಂಗನಾ ಪ್ರತಿಕ್ರಿಯಿಸಿದ್ದಾರೆ.