ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರಣಾವತ್ ಕಪಾಳಕ್ಕೆ ಹೊಡೆದ ಯೋಧೆಯನ್ನು ಅಮಾನತು ಮಾಡಲಾಗಿದೆ.
ಕೇಂದ್ರೀಯ ಕೈಗಾರಿಕ ಭದ್ರತಾ ಪಡೆಯ ಯೋಧೆ ಕುಲ್ವಿಂದರ್ ಕೌರ್ ಅವರನ್ನು ಅಮಾನತು ಮಾಡಲಾಗಿದೆ. ಈಕೆಯ ವಿರುದ್ಧ ಎಫ್ಐಆರ್ ದಾಖಲಿಸುವುದಕ್ಕೂ ನಿರ್ಧರಿಸಲಾಗಿದೆ.
ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕಂಗನಾ ರಣಾವತ್ ಕಪಾಳಕ್ಕೆ ಬಾರಿಸಿದ್ದರು ಯೋಧೆ ಕುಲ್ವಿಂದರ್ ಕೌರ್.
ಪಂಜಾಬ್ ರೈತರು ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದ ವೇಳೆ 100 ರೂಪಾಯಿ ಪಡೆದು ರೈತರು ಪ್ರತಿಭಟನೆ ನಡೆಸಿದ್ದಾರೆ ಎಂದು ಅವಮಾನ ಮಾಡಿದ್ದರು ಕಂಗನಾ.
ಆ ಪ್ರತಿಭಟನೆಯಲ್ಲಿ ನನ್ನ ತಾಯಿಯೂ ಪಾಲ್ಗೊಂಡಿದ್ದರು ಎಂದು ಕಂಗನಾ ಕಪಾಳಕ್ಕೆ ಬಾರಿಸಿದ ಬಳಿಕ ಆ ಯೋಧೆ ಹೇಳಿದ್ದಾರೆ.
ADVERTISEMENT
ADVERTISEMENT