ಕೆಲವರು ಹಾಲನ್ನು ಹಾಗೇ ಕುಡಿದರೆ ಇನ್ನು ಕೆಲವರು ಹಾಲನ್ನು ಇತರ ಹಣ್ಣುಗಳ ಜೊತೆ ಅಥವಾ ಇನ್ನಿತರ ಆಹಾರಪದಾರ್ಥಗಳ ಜೊತೆ ಮಿಶ್ರಣ ಮಾಡಿ ಸೇವಿಸುತ್ತಾರೆ. ಅವರವರ ದೇಹಕ್ಕೆ ಅನುಗುಣವಾಗಿ ಹಾಲಿನ ಸೇವನೆಯನ್ನು ಇಷ್ಟಪಡುತ್ತಾರೆ. ಹಾಲನ್ನು ಅರಿಶಿಣದ ಜೊತೆ ಮಿಶ್ರಣ ಮಾಡಿ ಕುಡಿಯಬೇಕು ಎಂದು ಕೆಲವು ಆರೋಗ್ಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಪ್ರಮುಖವಾಗಿ ಬೆಳಗಿನ ಹಾಗೂ ಮಧ್ಯಾಹ್ನದ ಸಮಯದಲ್ಲಿ ಹಾಲಿನ ಸೇವನೆ ಮಾಡಬಾರದು ಎಂದು ಹೇಳುತ್ತಾರೆ.
ಆದರೆ ಚಿಂತಿಸಬೇಕಾಗಿಲ್ಲ, ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು,ಕೆಲವೊಂದು ಆಯುರ್ವೇದ ಸೂಚಿಸಲಾಗಿರುವ ಮನೆಮದ್ದುಗಳನ್ನು ಅನುಸರಿಸುತ್ತಾ ಹೋದರೆ, ಮಲಗಿದ ಕೂಡಲೇ ನಿದ್ದೆ ಆವರಿಸಿಕೊಳ್ಳುತ್ತದೆ ಜೊತೆಗೆ, ನಿದ್ರಾಹೀನತೆಯಿಂದಾಗಿ ಕಂಡು ಬರುವ ಹಲವಾರು ಆರೋಗ್ಯ ಸಮಸ್ಯೆಗಳು ಕೂಡ ದೂರವಾಗುತ್ತದೆ.
ನಿದ್ರಾಹೀನತೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಸಿಂಪಲ್ ಪರಿಹಾರ
ಅಶ್ವಗಂಧ ಪುಡಿ ಬೆರೆಸಿದ ಹಾಲು
ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಗುಣಲಕ್ಷಣ ಗಳು ಕಂಡು ಬರುವ ಅಶ್ವಗಂಧ, ನಿದ್ರಾ ಹೀನತೆ ಸಮಸ್ಯೆ ಯನ್ನು ದೂರ ಮಾಡಲು ಸಹಾಯ ಮಾಡುತ್ತದೆ.
ಹೀಗಾಗಿ ಒಂದು ವೇಳೆ ರಾತ್ರಿ ಮಲಗಿದ ಕೂಡಲೇ ನಿದ್ದೆ ಬಾರದೇ ಇರುವ, ಸಮಸ್ಯೆ ಎದುರಿಸುತ್ತಿದ್ದರೆ, ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲಿಗೆ ಒಂದು ಟೀ ಚಮಚದಷ್ಟು ಅಶ್ವಗಂಧದ ಪುಡಿಯನ್ನು ಬೆರೆಸಿ ಕುಡಿದು, ಸ್ವಲ್ಪ ಹೊತ್ತು ವಾಕಿಂಗ್ ಮಾಡಿ, ಆಮೇಲೆ ಮಲಗುವ ಅಭ್ಯಾಸ ಮಾಡಿದರೆ, ಕೂಡಲೇ ನಿದ್ದೆ ಆವರಿಸಿಕೊಂಡು ಬಿಡುತ್ತದೆ.
ಅರಿಶಿನ ಹಾಲು
ರಾತ್ರಿ ನಿದ್ದೆ ಬರುವುದಿಲ್ಲ, ಎಂದು ಕರಗುವವರು, ಪ್ರತಿ ದಿನ ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲಿಗೆ ಸ್ವಲ್ಪ ಚಿಟಿಕೆಯಷ್ಟು ಅರಿಶಿನ ಪುಡಿ ಹಾಕಿ ಮಿಶ್ರಣ ಮಾಡಿ ಕುಡಿದು ಮಲಗುವುದರಿಂದ, ಹತ್ತು ನಿಮಿಷದಲ್ಲಿ ನಿದ್ದೆ ಬಂದುಬಿಡುತ್ತದೆ!
ಇದಕ್ಕೆ ಪ್ರಮುಖ ಕಾರಣ ಅರಿಶಿನ ದಲ್ಲಿ ಕಂಡು ಬರುವ ಕರ್ಕ್ಯೂಮಿನ್ ಅಂಶ ಹಾಗೂ ಹಾಲಿನಲ್ಲಿರುವ ಹಾಲಿ ನಲ್ಲಿ ಸೆರಟೋನಿನ್ ಮತ್ತು ಮೆಲಟೋನಿನ್ ಎಂಬ ಹಾರ್ಮೋನುಗಳು, ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಕೂಡಲೇ ನಿದ್ದೆ ಆವರಿಸಿಬಿಡುವ ಹಾಗೆ ಮಾಡುತ್ತದೆ.
ಹರಳೆಣ್ಣೆಯಿಂದ ಪಾದಗಳನ್ನು ಮಸಾಜ್ ಮಾಡಿ
ಸ್ವಲ್ಪ ಹರಳೆಣ್ಣೆ (ತೆಂಗಿನಎಣ್ಣೆಯಾದರೂ ಪರವಾಗಿಲ್ಲ) ತಗೊಂಡು ಎರಡೂ ಪಾದಗಳ ಅಡಿ ಭಾಗಕ್ಕೆ ಎಣ್ಣೆ ಯನ್ನು ಹಚ್ಚಿ, ಸರಿಯಾಗಿ ಮಸಾಜ್ ಮಾಡಿಕೊಳ್ಳಿ.
ಆ ಬಳಿಕ ಸುಮಾರು ಅರ್ಧಗಂಟೆ ಕಳೆದ ಬಳಿಕ, ಎರಡೂ ಪಾದಗಳನ್ನ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದು ಕೊಂಡು, ಒಂದು ಕಾಟನ್ ಟವೆಲ್ನ ಸಹಾಯದಿಂದ, ಪಾದಗಳನ್ನು ಚೆನ್ನಾಗಿ ಒರೆಸಿಕೊಳ್ಳಿ.
ಈ ರೀತಿ ಪ್ರತಿದಿನ ಎಣ್ಣೆಯ ಮಸಾಜ್ ಮಾಡುವುದರಿಂದ, ಪಾದಗಳ ಭಾಗದಲ್ಲಿ ರಕ್ತಸಂಚಾರ ನರನಾಡಿಗಳಿಗೆ ಸರಿಯಾಗಿ ಸಂಚರಿಸಿ, ಆಕ್ಯುಪ್ರೆಸರ್ ಪಾಯಿಂಟ್ಸ್ ಸರಿ ಯಾಗಿ ಕಾರ್ಯ ನಿರ್ವಹಿಸುತ್ತದೆ. ಇದರಿಂದ ಬಹಳ ಬೇಗನೇ ನಿದ್ರೆ ಆವರಿಸಿ ಕೊಂಡು ಬಿಡುತ್ತದೆ.
ಲ್ಯಾವೆಂಡರ್ ಎಣ್ಣೆಯ ಸ್ನಾನ
ರಾತ್ರಿ ಮಲಗುವ ಮುನ್ನ, ಉಗುರು ಬೆಚ್ಚಗಿನ ನೀರುಸುವ ಬಕೆಟ್ಗೆ ನಾಲ್ಕೈದು ಹನಿಗಳಷ್ಟು ಲ್ಯಾವೆಂಡರ್ ಎಣ್ಣೆಯನ್ನು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿಕೊಂಡು, ಈ ಸುಗಂಧ ಭರಿತ ನೀರಿನಿಂದ ಸ್ನಾನ ಮಾಡುವುದರಿಂದ, ಮನಸ್ಸಿಗೆ ಉಲ್ಲಾಸ ಸಿಗುವುದರ ಜೊತೆಗೆ ರಾತ್ರಿಯ ಸಮಯದಲ್ಲಿ ಮಲಗಿದ ಕೂಡಲೇ ಗಡದ್ದಾಗಿ ನಿದ್ರೆ ಆವರಿಸಿಕೊಂಡು ಬಿಡುತ್ತದೆ.
ಈ ವಿಷಯಗಳು ನೆನಪಿರಲಿ
- ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಿ ಧ್ಯಾನ ಮಾಡುವ ಅಭ್ಯಾಸ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಕ್ರಮೇಣವಾಗಿ ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ. ರಾತ್ರಿ ಮಲಗುವ ಅರ್ಧ ಗಂಟೆ, ಮುನ್ನ ಮೊಬೈಲ್, ಕಂಪ್ಯೂಟರ್ನಿಂದ ದೂರವಿರಿ.
- ರಾತ್ರಿಯ ಊಟ ಮಾಡಿದ ನಂತರ, ಸ್ವಲ್ಪ ಹೊತ್ತು ವಾಕಿಂಗ್ ಮಾಡಿ, ಇದರಿಂದ ನಾವು ಸೇವಿಸಿದ ಆಹಾರ ಗಳು ಸರಿಯಾಗಿ ಜೀರ್ಣವಾಗಲು ನೆರವಾಗುತ್ತದೆ.
- ಕೆಫಿನ್ ಅಂಶ ಹೆಚ್ಚಿರುವ ಟೀ ಹಾಗೂ ಕಾಫಿ ಕುಡಿಯುವ ಅಭ್ಯಾಸ ವನ್ನು ಮಾಡಬೇಡಿ. ಪ್ರಮುಖವಾಗಿ ಆರೋ ಗ್ಯಕ್ಕೆ ಮಾರಕವಾಗಿರುವ ಮಧ್ಯಪಾನ, ಧೂಮಪಾನ ದಂತಹ ಕೆಟ್ಟ ಅಭ್ಯಾಸಗಳಿಂದ ದೂರವಿದ್ದರೆ ಬಹಳ ಒಳ್ಳೆಯದು.
- ಜೀವನದಲ್ಲಿ ಯಾವಾಗಲೋ ಆಗಿ ಹೋಗಿರುವಂತಹ ಅಹಿತಕರ ಘಟನೆಗಳನ್ನು ನೆನೆಸಿಕೊಂಡು ಮಲಗಲು ಮುಂದಾದರೆ, ಮಾನಸಿಕ ಒತ್ತಡ ಹೆಚ್ಚಾಗುವುದು ಮಾತ್ರ ವಲ್ಲದೆ, ನಿದ್ದೆ ಸಮಸ್ಯೆ ಕೂಡ ಕಾಡುತ್ತದೆ. ಹಾಗಾಗಿ ಯಾವುದೇ ಸಮಸ್ಯೆಗಳು ಇದ್ದರೂ ಕೂಡ ಅದನ್ನುಮಲಗಿ ಕೊಳ್ಳುವ ಸಮಯದಲ್ಲಿ ಚಿಂತಿಸಿ, ನಿದ್ದೆಗೆ ಸಮಸ್ಯೆ ತಂದು ಕೊಳ್ಳಬೇಡಿ.