Laptop: ಲ್ಯಾಪ್​ಟಾಪ್​, PC, ಟ್ಯಾಬ್ಲೆಟ್​ ಆಮದಿನ ನಿಷೇಧಕ್ಕೆ ತಡೆ – 24 ಗಂಟೆಯಲ್ಲೇ ಮೋದಿ ಸರ್ಕಾರದ ನಿರ್ಧಾರ ಬದಲು

ವಿದೇಶದಿಂದ ಲ್ಯಾಪ್​ಟಾಪ್​, ಕಂಪ್ಯೂಟರ್​, ಟ್ಯಾಬ್ಲೆಟ್​ ಆಮದು ಮಾಡಿಕೊಳ್ಳಬಾರದು ಎಂದು ನಿರ್ಬಂಧ ಹೇರಿದ್ದ ತನ್ನದೇ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಾರ್ಪಾಡು ಮಾಡಿದೆ.

ಆಗಸ್ಟ್​ 4ರಿಂದಲೇ ನಿಷೇಧ ಹೇರಿದ್ದ ಆದೇಶವನ್ನು ಬದಲಾಯಿಸಿರುವ ಮೋದಿ ಸರ್ಕಾರ ಗಣಕ ತಯಾರಿಕಾ ಕಂಪನಿಗಳಿಗೆ ವಿದೇಶದಿಂದ ಲ್ಯಾಪ್​ಟಾಪ್​, ಕಂಪ್ಯೂಟರ್​ ಮತ್ತು ಟ್ಯಾಬ್ಲೆಟ್​ ಆಮದಿಗೆ ಅಕ್ಟೋಬರ್​ 31ರವರೆಗೆ ಅನುಮತಿ ನೀಡಿದೆ.

ಆಗಸ್ಟ್​ 3ರಂದು ಆದೇಶ ಹೊರಡಿಸಿದ್ದ ವಾಣಿಜ್ಯ ಸಚಿವಾಲಯ ಆಗಸ್ಟ್​ 4ರಿಂದಲೇ 12 ಗಂಟೆಯಲ್ಲೇ ಲ್ಯಾಪ್​ಟಾಪ್​, ಪಿಸಿ ಮತ್ತು ಟ್ಯಾಬ್ಲೆಟ್​ ಆಮದಿನ ಮೇಲೆ ನಿಷೇಧ ಹೇರಿತ್ತು.

ಆದರೆ ಕಾಲಾವಕಾಶ ನೀಡದೇ ಏಕಾಏಕಿ ಆಮದಿನ ಮೇಲೆ ನಿರ್ಬಂಧ ಹೇರಿದ್ದರ ವಿರುದ್ಧ ಗಣಕ ತಯಾರಿಕಾ ಕಂಪನಿಗಳು ಅಸಮಾಧಾನ ಹೊರಹಾಕಿದ್ದವು. 

ಇದಾದ ಬಳಿಕ ತಾನೇ ಹೊರಡಿಸಿದ್ದ ನಿರ್ಬಂಧ ಆದೇಶವನ್ನು ಮೋದಿ ಸರ್ಕಾರ 24 ಗಂಟೆಯೊಳಗೆ ಹಿಂಪಡೆದಿದೆ.

LEAVE A REPLY

Please enter your comment!
Please enter your name here